ದೋಚಿ ಪರಾರಿಯಾಗಿದ್ದ ನೀರವ್, ಮಲ್ಯ, ಚೋಕ್ಸಿಯಿಂದ 19,111.20 ಕೋಟಿ ರೂ ಆಸ್ತಿ ಜಪ್ತಿ

Prasthutha|

ನವದೆಹಲಿ: ಅಪಾರ ಪ್ರಮಾಣದ ಮೌಲ್ಯಯುತ ಹಣವನ್ನು ದೋಚಿ ದೇಶವನ್ನು ಕೊಳ್ಳೆ ಹೊಡೆದು ಪರಾರಿಯಾಗಿದ್ದ ಉದ್ಯಮಿಗಳಾದ ವಿಜಯ್ ಮಲ್ಯ, ಮೆಹುಲ್ ಚೋಕ್ಸಿ ಮತ್ತು ನೀರವ್ ಮೋದಿ ಅವರಿಂದ 19,111.20 ಕೋಟಿ ರೂಪಾಯಿಯಷ್ಟು ಆಸ್ತಿ – ಪಾಸ್ತಿಗಳನ್ನು ಜಪ್ತಿ ಮಾಡಲಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.

- Advertisement -


‘ಕೊಳ್ಳೆ ಹೊಡೆದು ಪರಾರಿಯಾದ ಮೂವರು ವಂಚನೆಗಳ ಮೂಲಕ ಅಧಿಕ ಪ್ರಮಾಣದ ಮೊತ್ತವನ್ನು ದೋಚಿದ್ದಾರೆ. ಇದರಿಂದಾಗಿ ಸಾಲದಾತರಿಗೆ ಒಟ್ಟು 22,585.83 ಕೋಟಿ ರೂಪಾಯಿಯಷ್ಟು ನಷ್ಟವುಂಟಾಗಿದೆ’ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ರಾಜ್ಯಸಭೆಗೆ ಲಿಖಿತ ಪ್ರತಿಕ್ರಿಯೆ ನೀಡಿದ್ದಾರೆ.


ಒಟ್ಟು ಮೊತ್ತ 22,585.83 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಇದುವರೆಗೆ 19,111.20 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಪಿ ಎಮ್ ಎಲ್ ಎ ಅಡಿಯಲ್ಲಿ (Prevention of Money Laundering Act) ಜಪ್ತಿ ಮಾಡಲಾಗಿದೆ ಎಂದೂ ಲಿಖಿತ ಪ್ರತಿಕ್ರಿಯೆ ಮೂಲಕ ತಿಳಿಸಿದ್ದಾರೆ.



Join Whatsapp