ಉತ್ತರ ಪ್ರದೇಶ ಚುನಾವಣಾ ಅಕ್ರಮ: ಬಯಲಿಗೆಳೆದ ಪತ್ರಕರ್ತನ ಬಂಧನದ ಕುರಿತು ನ್ಯಾಯಾಂಗ ತನಿಖೆಗೆ ‘ಎಡಿಟರ್ಸ್ ಗಿಲ್ಡ್’ ಆಗ್ರಹ

Prasthutha|

ನವದೆಹಲಿ: ಇತ್ತೀಚೆಗೆ ನಡೆದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನಡೆದ ಅಕ್ರಮವನ್ನು ವರದಿ ಮಾಡಿ, ಬಯಲಿಗೆಳೆದ ಪತ್ರಕರ್ತನ ಬಂಧನದ ಕುರಿತು ‘ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ‘ ಅಸಮಾಧಾನ ವ್ಯಕ್ತಪಡಿಸಿದೆ.

- Advertisement -


ಪೊಲೀಸ್ ಕಸ್ಟಡಿಯಿಂದ ಈ ಕೂಡಲೇ ಗೌರವ್ ರನ್ನು ಬಂಧಮುಕ್ತಿಗೊಳಿಸಬೇಕು. ಈ ಕುರಿತು ನ್ಯಾಯಾಂಗ ಸ್ವಾಯತ್ತದಲ್ಲಿ ತನಿಖೆ ನಡೆಸಬೇಕು ಎಂದು ‘ಎಡಿಟರ್ಸ್ ಗಿಲ್ಡ್’ ಆಗ್ರಹಿಸಿದೆ.


‘ಪಂಜಾಬ್ ಕೇಸರಿ’ ಎಂಬ ಹಿಂದಿ ಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಆಗ್ರಾ ಮೂಲದ ಪತ್ರಕರ್ತ ಗೌರವ್ ಬನ್ಸಾಲ್ ಎಂಬುವವರು ಉತ್ತರ ಪ್ರದೇಶ ಚುನಾವಣೆಯ ಸಂದರ್ಭದಲ್ಲಿ ನಡೆದ ಅನೀತಿ – ಅವ್ಯವಹಾರವನ್ನು ವರದಿ ಮಾಡಿದ್ದರು. ‘ವರದಿ ಮಾಡುವ ಮೂಲಕ ಬನ್ಸಾಲ್ ಅವರು ಗಲಭೆಗಳನ್ನು ಸೃಷ್ಟಿಸಿದ್ದರು’ ಎಂದು ಪೊಲೀಸರು ಆರೋಪಿಸಿದ್ದರು.




Join Whatsapp