ಹರ್ಭಜನ್ ಸಿಂಗ್ ಹೊರತು ಪಡಿಸಿ ಉಳಿದ ಎಎಪಿ ಸಂಸದರು ದೆಹಲಿ ರಿಮೋಟ್ ಕಂಟ್ರೋಲ್ ಗೆ ಬ್ಯಾಟರಿಗಳು: ಸಿಧು ಟೀಕೆ

Prasthutha|

ಚಂಡೀಗಢ: ಪಂಜಾಬ್ ನ ರಾಜ್ಯಸಭಾ ನಾಮನಿರ್ದೇಶಿತರಲ್ಲಿ ಆಮ್ ಆದ್ಮಿ ಪಕ್ಷದ ಕ್ರಿಕೆಟಿಗ ಹರ್ಭಜನ್ ಸಿಂಗ್ ಹೊರತು ಪಡಿಸಿ ಉಳಿದ ಸಂಸದರೆಲ್ಲರೂ ದೆಹಲಿ ರಿಮೋಟ್ ಕಂಟ್ರೋಲ್ ಗೆ ಬ್ಯಾಟರಿಗಳು ಎಂದು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಟೀಕಿಸಿದ್ದಾರೆ.

- Advertisement -

ದೆಹಲಿ ರಿಮೋಟ್ ಕಂಟ್ರೋಲ್ ಗೆ ಹೊಸ ಬ್ಯಾಟರಿಗಳು ಸೇರ್ಪಡೆಯಾಗಿವೆ. ಹರ್ಭಜನ್ ಅವರನ್ನು ಹೊರತು ಪಡಿಸಿದರೆ, ಉಳಿದವರು ದೆಹಲಿ ರಿಮೋಟ್ ಕಂಟ್ರೋಲ್ ಗೆ ಬ್ಯಾಟರಿಗಳಾಗಿದ್ದಾರೆ. ಇದರಿಂದ ಪಂಜಾಬ್ ಗೆ ದ್ರೋಹವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. 

ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ 117 ಸ್ಥಾನಗಳ ಪೈಕಿ 92 ಸ್ಥಾನಗಳಲ್ಲಿ ಆಮ್ ಅದ್ಮಿ ಗೆಲುವು ಸಾಧಿಸಿರುವ ಹಿನ್ನೆಲೆ ಐದು ಮಂದಿ ನಾಮನಿರ್ದೇಶಿತ ಅಭ್ಯರ್ಥಿಗಳು ರಾಜ್ಯಸಭೆಗೆ ಪಂಜಾಬ್ ನಿಂದ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ಇದರಿಂದ ರಾಜ್ಯಸಭೆಯಲ್ಲಿ ಆಪ್ ಸಂಖ್ಯೆ 3 ರಿಂದ 8ಕ್ಕೆ ಏರಿಕೆಯಾಗಲಿದೆ.

- Advertisement -

ಹರ್ಭಜನ್ ಸಿಂಗ್ ಜೊತೆಗೆ ದೆಹಲಿಯ ಆಪ್ ಶಾಸಕ ರಾಘವ್ ಚಡ್ಡಾ, ಸಂದೀಪ್ ಪಾಟಕ್, ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ ಕುಲಪತಿ ಅಶೋಕ್ ಮಿತ್ತಲ್ ಹಾಗೂ ಕೃಷ್ಣ ಪ್ರಾಣ್ ಸ್ತನ ಕ್ಯಾನ್ಸರ್ ಕೇರ್ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕ ಸಂಜೀವ್ ಅರೋರಾ ಅವರನ್ನು ಪಂಜಾಬ್ ನಿಂದ ಎಎಪಿಯಿಂದ ರಾಜ್ಯಸಭೆಗೆ ನಾಮನಿರ್ದೇಶನ  ಮಾಡಲಾಗಿದೆ.



Join Whatsapp