ಮಂಗಳೂರು: ದಿನೇಶ್ ಕುಟುಂಬಕ್ಕೆ ನ್ಯಾಯಕ್ಕಾಗಿ ಆಗ್ರಹಿಸಿ ಮಹಿಳಾ ಕಾಂಗ್ರೆಸ್ ದಿಢೀರ್ ಧರಣಿ

Prasthutha|

ಮಂಗಳೂರು: ಬಜರಂಗದಳದ ಕಾರ್ಯಕರ್ತನಿಂದ ಹತ್ಯೆಗೀಡಾದ ದಿನೇಶ್ ಕನ್ಯಾಡಿ ಕುಟುಂಬಕ್ಕೆ ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಮಹಿಳಾ ಕಾಂಗ್ರೆಸ್ ದಿಢೀರ್ ಧರಣಿ ನಡೆಸಿತು.

- Advertisement -

ಕೆಪಿಸಿಸಿ ಮಹಿಳಾ ರಾಜ್ಯ ಘಟಕಾಧ್ಯಕ್ಷೆ ಪುಷ್ಪ ಅಮರನಾಥ್ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಪ್ರವೇಶ ದ್ವಾರದಲ್ಲೇ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಭೇಟಿಗೆಂದು ಆಗಮಿಸಿದ ಮಹಿಳಾ ಕಾಂಗ್ರೆಸ್ ನಿಯೋಗವು ಏಕಾಏಕಿ ಧರಣಿ ಕೂತು ಘೋಷಣೆ ಕೂಗಿತು. ಅಲ್ಲದೇ, ಸ್ಥಳದಲ್ಲೇ ಘೋಷವಾಕ್ಯಗಳನ್ನು ಭಿತ್ತಿಪತ್ರದಲ್ಲಿ ಬರೆದು ರಾಜ್ಯ ಘಟಕಾಧ್ಯಕ್ಷೆ ಪುಷ್ಪ ಅಮರನಾಥ್ ನಿಯೋಗದಲ್ಲಿದ್ದ ಮಹಿಳೆಯರಿಗೆ ಹಂಚಿದರು.

- Advertisement -

ಈ ಸಂದರ್ಭ ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕಾಧ್ಯಕ್ಷೆ ಶಾಲೆಟ್ ಪಿಂಟೋ, ಅಪ್ಪಿ ಸಹಿತ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಬಳಿಕ ಜಿಲ್ಲಾಧಿಕಾರಿ ಬಳಿ ತೆರಳಿ ಮನವಿ ಸಲ್ಲಿಸಲಾಯಿತು.  ಮೃತ ದಿನೇಶ್ ಪತ್ನಿ ಹಾಗೂ ತಾಯಿ ಕೂಡಾ ಜೊತೆಗಿದ್ದರು.



Join Whatsapp