ಬೆಂಗಳೂರು: ರಾಷ್ಟ್ರಧ್ವಜಕ್ಕೆ ಅವಮಾನ ಎಸಗಿದ ದೇಶದ್ರೋಹಿ ಕಲ್ಲಡ್ಕ ಪ್ರಭಾಕರ ಭಟ್ ನನ್ನು ಯಾವಾಗ ಬಂಧಿಸುತ್ತೀರಿ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿದ ಕೆಪಿಸಿಸಿ, ಮಾನ್ಯ ಬೊಮ್ಮಾಯಿ ಅವರೇ, ದೇಶ ವಿರೋಧಿಗಳನ್ನು ಸಹಿಸುವುದಿಲ್ಲ ಎಂದು ಹೇಳಿಕೆ ಕೊಟ್ಟು ವೀರಾವೇಶ ಮೆರೆದಿದ್ದೀರಿ, ಸಂತೋಷ. ರಾಷ್ಟ್ರಧ್ವಜಕ್ಕೆ ಅವಮಾನ ಎಸಗಿದ ದೇಶದ್ರೋಹಿ ಕಲ್ಲಡ್ಕ ಪ್ರಭಾಕರ ಭಟ್ಟನನ್ನು ಯಾವಾಗ ಬಂಧಿಸುತ್ತೀರಿ? ಆತನನ್ನು ಜೈಲಿಗಟ್ಟಿ ನಿಮ್ಮ ಹೇಳಿಕೆಗೆ ಬದ್ಧತೆ ತೋರಿಸಿ. ಹಾಗೆಯೇ ಈಶ್ವರಪ್ಪರ ರಾಜೀನಾಮೆ ಯಾವಾಗ ಪಡೆಯುವಿರಿ?. ಬಿಜೆಪಿ ಸರ್ಕಾರದ ಸಾಧನೆಗಳು, ಸಿನೆಮಾ ಪ್ರಚಾರ ಮಾಡುವುದು, ಸಿನೆಮಾ ನೋಡುವುದು, ಸಿನೆಮಾ ಮಾಡುವುದು!. ಕೃಷಿ ಇಲಾಖೆಯಲ್ಲಿ ಜ್ವಲಂತ ಸಮಸ್ಯೆಗಳಿವೆ, ರೈತರ ಸಂಕಷ್ಟ ಹಲವಾರಿವೆ, ರಸಗೊಬ್ಬರ ಅಭಾವವಿದೆ. ಆದರೆ ಕೃಷಿ ಸಚಿವರು ನಟನೆಯಲ್ಲಿ ಬ್ಯುಸಿಯಾಗಿದ್ದಾರೆ ಎಂದು ಬರೆದುಕೊಂಡಿದೆ.