ಅಪಘಾತದಲ್ಲಿ ಸಹಾಯ ಮಾಡಿದವರಿಗೆ 5 ಸಾವಿರ ರೂ.ನಗದು ಬಹುಮಾನ : ತಮಿಳುನಾಡು ಸಿಎಂ

Prasthutha|

ತಮಿಳುನಾಡು : ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ವಿಶೇಷವಾದ ಘೋಷಣೆಯೊಂದನ್ನು ಮಾಡಿದ್ದಾರೆ. ರಾಜ್ಯದಲ್ಲಿ ರಸ್ತೆ, ವಾಹನ ಅಪಘಾತವಾದ ಸಂದರ್ಭದಲ್ಲಿ ತೀವ್ರವಾಗಿ ಗಾಯಗೊಂಡವರನ್ನು ಕೂಡಲೇ ಯಾರು ಆಸ್ಪತ್ರೆಗೆ ದಾಖಲು ಮಾಡುತ್ತಾರೋ, ಈ ಮೂಲಕ ಅವರಿಗೆ ಆದಷ್ಟು ಬೇಗ ಚಿಕಿತ್ಸೆ ಸಿಗಲು ಕಾರಣವಾಗುತ್ತಾರೋ ಅವರಿಗೆ ನಗದು ಬಹುಮಾನ ಮತ್ತು ಒಂದು ಶ್ಲಾಘನೆ ಪ್ರಮಾಣ ಪತ್ರ ನೀಡುವುದಾಗಿ ಘೋಷಿಸಿದ್ದಾರೆ.

- Advertisement -

ಈ ಬಗ್ಗೆ ಟ್ವೀಟ್ ಮಾಡಿರುವ ಎಂ.ಕೆ.ಸ್ಟಾಲಿನ್, ಯಾರೇ ಅಪಘಾತಕ್ಕೀಡಾಗಲಿ, ಅವರಿಗೂ ಒಂದು ಗೋಲ್ಡನ್ ಪೀರಿಯಡ್ ಅಂತಿರುತ್ತದೆ. ಈ ಅವಧಿಯಲ್ಲಿ ಅವರಿಗೆ ಸೂಕ್ತ ಚಿಕಿತ್ಸೆ ಸಿಕ್ಕರೆ, ಜೀವಕ್ಕೆ ಅಪಾಯ ಆಗುವ ಸನ್ನಿವೇಶ ಕಡಿಮೆ ಇರುತ್ತದೆ ಎಂದರು.

ಅದೆಷ್ಟೋ ಜನರು ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಡವಾಗಿಯೇ ಸಾಯುತ್ತಾರೆ. ಹೀಗೆ ಅಪಘಾತಕ್ಕೆ ಒಳಗಾದವರನ್ನು ಆ ಗೋಲ್ಡನ್ ಪೀರಿಯಡ್ನಲ್ಲಿ ಯಾರು ಆಸ್ಪತ್ರೆಗೆ ದಾಖಲಿಸುತ್ತಾರೋ ಅವರಿಗೆ 5 ಸಾವಿರ ರೂಪಾಯಿ ನಗದು ಬಹುಮಾನ, ಪ್ರಮಾಣ ಪತ್ರ ಕೊಡುವುದಾಗಿ ತಿಳಿಸಿದ್ದಾರೆ.




Join Whatsapp