ತಲಪಾಡಿ ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಕೆ: SDPI ನೇತೃತ್ವದ ನಾಗರಿಕ ಸಮಿತಿ ಹೋರಾಟಕ್ಕೆ ಸ್ಪಂದಿಸಿದ ಪಂಚಾಯತ್ ಅಧಿಕಾರಿಗಳು

Prasthutha|

ತಲಪಾಡಿ: ತಲಪಾಡಿ ಗ್ರಾಮದ 1,2,3,4 ನೇ ವಾರ್ಡಿಗೆ ಟ್ಯಾಂಕರ್ ಮೂಲಕ  ಕುಡಿಯುವ ನೀರು ಸರಬರಾಜು ಆರಂಭಗೊಂಡಿದೆ. ನೀರು ಪೂರೈಸುವಂತೆ ಆಗ್ರಹಿಸಿ ಇಂದು ನಾಗರೀಕ ಸಮಿತಿಯ ನೇತೃತ್ವದಲ್ಲಿ ಸಾರ್ವಜನಿಕರು ತಲಪಾಡಿ ಗ್ರಾಮ ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದರು.

- Advertisement -

SDPI ಗ್ರಾಮ ಸಮಿತಿ ಅಧ್ಯಕ್ಷರಾದ ಇಮ್ರಾನ್ ಪೂಮಣ್ಣು ಮುತ್ತಿಗೆಯ ನೇತೃತ್ವವಹಿಸಿದ್ದರು. ಗಡಿನಾಡು ರಕ್ಷಣಾ ವೇದಿಕೆಯ ಅಧ್ಯಕ್ಷರಾದ  ಸಿದ್ದೀಕ್ ತಲಪಾಡಿ ಮತ್ತು ಎಸ್.ಡಿ.ಪಿ.ಐ ನ ಹಕೀಮ್ ಕೆಸಿ ನಗರ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ್ದರು.ಈ ಸಂದರ್ಭ ಪ್ರತಿಭಟನಾಕಾರರ ಜೊತೆ ಮಾತನಾಡಿದ ಪಂಚಾಯತ್ ಅಧಿಕಾರಿಗಳು ಇಂದಿನಿಂದಲೇ ನೀರು ಸರಬರಾಜು ಆರಂಭಿಸುವ ಬಗ್ಗೆ ಭರವಸೆ ನೀಡಿದ್ದರು.

ಅದರಂತೆ ಇದೀಗ ನೀರು ಸರಬರಾಜು ಆರಂಭಗೊಂಡಿದ್ದು ಈ ಹೋರಾಟಕ್ಕೆ ಸಹಕರಿಸಿದ ಎಲ್ಲರಿಗೂ , ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯತ್ ಸದಸ್ಯರು ಹಾಗೂ ಪಿಡಿಒ ಆಡಳಿತ ಸಿಬ್ಬಂದಿಗಳಿಗೆ ನಾಗರಿಕ ಸಮಿತಿ ಧನ್ಯವಾದ ಸಲ್ಲಿಸಿದೆ.




Join Whatsapp