‘ಟಾಟಾ ಸಾಹಿತ್ಯ ಸಮ್ಮೇಳನ’ | ಚೊಮ್ಸ್ಕಿ, ವಿಜಯ್ ಪ್ರಸಾದ್ ಚರ್ಚಾ ಕಾರ್ಯಕ್ರಮ ದಿಢೀರ್ ರದ್ದು

Prasthutha|

ನವದೆಹಲಿ : ಖ್ಯಾತ ಶಿಕ್ಷಣ ತಜ್ಞ ನೋಮ್ ಚೊಮ್ಸ್ಕಿ ಅವರ ಹೊಸ ಪುಸ್ತಕ ‘ಇಂಟರ್ ನ್ಯಾಶನಲಿಸಂ ಆರ್ ಎಕ್ಸ್ಟಿಂಕ್ಷನ್’ ಕುರಿತ ‘ಟಾಟಾ ಸಾಹಿತ್ಯ ಲೈವ್ ಸಮ್ಮೇಳನ’ ಆನ್ ಲೈನ್ ನಲ್ಲಿ ಏರ್ಪಡಿಸಲಾಗಿದ್ದ ಚರ್ಚಾಕೂಟವನ್ನು ಏಕಾಏಕಿ ರದ್ದು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈ ಕುರಿತು ಶಿಕ್ಷಣ ತಜ್ಞರಾದ ನೋಮ್ ಚೊಮ್ಸ್ಕಿ ಮತ್ತು ವಿಜಯ್ ಪ್ರಸಾದ್ ಜಂಟಿ ಹೇಳಿಕೆ ನೀಡಿದ್ದಾರೆ.

- Advertisement -

ಶುಕ್ರವಾರ ರಾತ್ರಿ 9 ಗಂಟೆಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ, ಮಧ್ಯಾಹ್ನ 1 ಗಂಟೆಗೆ ಇ-ಮೇಲ್ ಕಳುಹಿಸಿ, ತಮ್ಮ ಕಾರ್ಯಕ್ರಮ ರದ್ದಾಗಿದೆ ಎಂಬ ಮಾಹಿತಿ ತಮಗೆ ಬಂದಿರುವುದಾಗಿ ಅವರು ತಿಳಿಸಿದ್ದಾರೆ.

ಯಾಕೆ ಕಾರ್ಯಕ್ರಮ ರದ್ದಾಗಿದೆ ಎಂಬುದು ಗೊತ್ತಾಗಿಲ್ಲ, ಇದು ಸೆನ್ಸಾರ್ ಶಿಪ್ ನ ಪ್ರಶ್ನೆಯೇ ಎಂಬುದು ತಮ್ಮಲ್ಲಿ ಪ್ರಶ್ನೆಯೊಂದನ್ನು ಹುಟ್ಟುಹಾಕಿದೆ ಎಂದು ಅವರು ಹೇಳಿದ್ದಾರೆ.

- Advertisement -

ಟಾಟಾ ಗ್ರೂಪ್ ಕಾರ್ಯಕ್ರಮಕ್ಕೆ ಪ್ರಾಯೋಜಕತ್ವ ನೀಡುತ್ತಿರುವುದರಿಂದ, ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಚೊಮ್ಸ್ಕಿಗೆ ಕೆಲವು ಪ್ರಗತಿಪರರ ಒತ್ತಡ ಕೇಳಿಬಂದಿತ್ತು. ಹೀಗಾಗಿ ತಾವು ಟಾಟಾ ಸೇರಿದಂತೆ ಕಾರ್ಪೊರೇಟ್ ಸಂಸ್ಥೆಗಳ ಬಗ್ಗೆ ಏನು ಮಾತನಾಡಲಿದ್ದೇವೆ ಎಂಬುದಾಗಿ ಚೊಮ್ಸ್ಕಿ ಹೇಳಿಕೆಯೊಂದನ್ನು ನೀಡಿದ್ದರು. ಅದರ ಬೆನ್ನಲ್ಲೇ ಕಾರ್ಯಕ್ರಮ ರದ್ದಾಗಿದೆ.      



Join Whatsapp