ಭಾರತ -ಇಸ್ರೇಲ್‌ ರಾಜತಾಂತ್ರಿಕ ಬಾಂಧವ್ಯ ಸಂಸ್ಮರಣಾ ದಿನಾಚರಣೆ; ಮುಖ್ಯ ಅತಿಥಿಯಾಗಿ ಇಸ್ರೇಲ್‌ ಪ್ರಧಾನಿ ನಫ್ತಾಲಿ ಬೆನ್ನೆಟ್‌

Prasthutha|

ಹೊಸದಿಲ್ಲಿ: ಭಾರತ -ಇಸ್ರೇಲ್‌ ನಡುವಿನ ರಾಜತಾಂತ್ರಿಕ ಬಾಂಧವ್ಯ ಸ್ಥಾಪನೆಯಾಗಿ ಮೂವತ್ತು ವರ್ಷಗಳು ಕಳೆದಿದ್ದು, ನವದೆಹಲಿಯಲ್ಲಿ ನಡೆಯಲಿರುವ ಅದರ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಇಸ್ರೇಲ್‌ ಪ್ರಧಾನಿ ನಫ್ತಾಲಿ ಬೆನ್ನೆಟ್‌ ಭಾಗವಹಿಸಲಿದ್ದಾರೆ.

- Advertisement -

2021ರ ಜೂನ್‌ನಲ್ಲಿ ಬೆನ್ನೆಟ್‌ ಇಸ್ರೇಲ್‌ ಪ್ರಧಾನಮಂತ್ರಿಯಾದ ಬಳಿಕ ಮೊದಲ ಬಾರಿಗೆ ಭಾರತ ಪ್ರವಾಸ ಕೈಗೊಳ್ಳುತ್ತಿದ್ದು, ಎಪ್ರಿಲ್ 2 ರಂದು ದೆಹಲಿಗೆ ಆಗಮಿಸಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ತಂತ್ರಜ್ಞಾನ ಮತ್ತು ಸಂಶೋಧನೆ, ಭದ್ರತೆ ಮತ್ತು ಸೈಬರ್‌, ಕೃಷಿ ಮತ್ತು ಹವಾಮಾನ ಬದಲಾವಣೆ ಕ್ಷೇತ್ರಗಳಲ್ಲಿ ಪ್ರವಾಸದ ವೇಳೆ ಎರಡೂ ರಾಷ್ಟ್ರಗಳು ವಿಸ್ತೃತ ಸಹಕಾರ ಮತ್ತು ಬಾಂಧವ್ಯ ವೃದ್ಧಿಸುವ ನಿಟ್ಟಿನಲ್ಲಿ ಒಪ್ಪಂದಗಳಿಗೆ ಸಹಿ ಹಾಕಲಿವೆ ಎಂದು ಮೂಲಗಳು ತಿಳಿಸಿವೆ.



Join Whatsapp