ದಕ್ಷಿಣ ಭಾರತದ ಭಾಷೆಗಳಿಗೆ “ದಿ ಕಾಶ್ಮೀರ್‌ ಫೈಲ್ಸ್‌” ಡಬ್ಬಿಂಗ್; ಕನ್ನಡಕ್ಕೆ ಡಬ್‌ ಮಾಡಲು ಆರಗ ಜ್ಞಾನೇಂದ್ರ ಒತ್ತಾಯ

Prasthutha|

ಹೊಸದಿಲ್ಲಿ: ದೇಶಾದ್ಯಂತ ವ್ಯಾಪಕ ಟೀಕೆಗೆ  ಗುರಿಯಾಗಿರುವ  “ದಿ ಕಾಶ್ಮೀರ್‌ ಫೈಲ್ಸ್‌’ ಚಲನ ಚಿತ್ರವವನ್ನು ದಕ್ಷಿಣ ಭಾರತದ ನಾಲ್ಕು ಭಾಷೆಗಳಿಗೆ ಡಬ್ಬಿಂಗ್‌ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ.

- Advertisement -

ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಿಗೆ ಡಬ್‌ ಆಗಲಿದ್ದು, ಡಬ್‌ ಆದ ಚಿತ್ರ ಬರುವವರೆಗೂ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕೇರಳದಲ್ಲಿ ಸಿನೆಮಾವನ್ನು ಸಬ್‌ಟೈಟಲ್‌ಗ‌ಳೊಂದಿಗೆ ಪ್ರಸಾರ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಕೆಲವು ದಿನಗಳ ಹಿಂದೆಯಷ್ಟೇ ಕರ್ನಾಟಕ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಸಿನೆಮಾವನ್ನು ಕನ್ನಡಕ್ಕೆ ಡಬ್‌ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು.



Join Whatsapp