ಅನುಮತಿ ಪಡೆಯದೇ ಛತ್ರಪತಿ ಶಿವಾಜಿ ಪ್ರತಿಮೆ ಸ್ಥಾಪಿಸಲು ಯತ್ನ: ಉದ್ವಿಗ್ನ ಪರಿಸ್ಥಿತಿ, ಸೆ.144 ಜಾರಿ

Prasthutha|

ನಿಝಾಮಾಬಾದ್: ಜಿಲ್ಲಾಡಳಿತದ ಅನುಮತಿ ಪಡೆಯದೇ ರಾತ್ರೋರಾತ್ರಿ ಗುಂಪೊಂದು ಛತ್ರಪತಿ ಶಿವಾಜಿಯ ಪ್ರತಿಮೆ ಸ್ಥಾಪಿಸಲು ಮುಂದಾದ ಪರಿಣಾಮ ತೆಲಂಗಾಣದ ನಿಝಾಮಾಬಾದ್ ಜಿಲ್ಲೆಯ ಬೋಧನ್ ಟೌನ್’ನಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರತಿಮೆ ಸ್ಥಾಸಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ವಿವಾದ ಏರ್ಪಟ್ಟಿದ್ದು, ಪರಸ್ಪರ ಕಲ್ಲು ತೂರಾಟ ನಡೆಸಿವೆ.
ಪ್ರತಿಮೆ ಸ್ಥಾಪನೆಗೆ ಯಾವುದೇ ಅನುಮತಿ ಪಡೆಯಲಾಗಿಲ್ಲ ಎಂದು ನಿಝಾಮಾಬಾದ್ ಪೊಲೀಸ್ ಕಮಿಷನರ್ ಕೆ.ಆರ್.ನಾಗರಾಜು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

- Advertisement -


‘ನಿಝಾಮಾಬಾದ್‌’ನಲ್ಲಿ ಗುಂಪನ್ನು ಚದುರಿಸಲು ಮತ್ತು ಪರಿಸ್ಥಿತಿಯನ್ನು ಹತೋಟಿಗೆ ತರಲು ಅಶ್ರುವಾಯು ಬಳಸಲಾಗಿದೆ. ಕಲ್ಲು ಅತೂರಾಟದಲ್ಲಿ ಪೊಲೀಸ್ ಪೇದೆಯೊಬ್ಬರು ಗಾಯಗೊಂಡಿದ್ದು, ನಗರದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ’ ಎಂದು ಕಮಿಷನರ್ ಕೆ.ಆರ್.ನಾಗರಾಜು ತಿಳಿಸಿದ್ದಾರೆ.
ಇದೇ ವೇಳೆ, ‘ಶಿವಾಜಿ ಮಹಾರಾಜರ ವಿಗ್ರಹ ಸ್ಥಾಪನೆ ಪ್ರಸ್ತಾಪಕ್ಕೆ ಬೋಧನ್ ಮುನ್ಸಿಪಲ್ ಕೌನ್ಸಿಲ್ಅಂಗೀಕರ ನೀಡಿದೆ, ಆದರೆ
ಟಿಆರ್’ಎಸ್-ಎಂಐಎಂ ಪಕ್ಷದ ಸದಸ್ಯರು ಪಟ್ಟಣದಲ್ಲಿ ಗದ್ದಲ ಮತ್ತು ಉದ್ವಿಗ್ನತೆಯನ್ನು ಸೃಷ್ಟಿಸುತ್ತಿದ್ದಾರೆ ಎಂದು ನಿಝಾಮಾಬಾದ್ ನ ಬಿಜೆಪಿ ಮುಖಂಡ ಮತ್ತು ಸಂಸದ ಧರ್ಮಪುರಿ ಅರವಿಂದ್ ಟ್ವಿಟರ್’ನಲ್ಲಿ ಆರೋಪ ಮಾಡಿದ್ದಾರೆ.



Join Whatsapp