ಪೆಗಾಸೆಸ್ ಸ್ಪೈವೇರ್ ಬೇಹುಗಾರಿಕೆ । ತಜ್ಞರ ತಾಂತ್ರಿಕ ಸಮಿತಿ ರಚಿಸಿದ ಸುಪ್ರೀಮ್ ಕೋರ್ಟ್

Prasthutha|

ನವದೆಹಲಿ: ಮೋದಿ ನೇತೃತ್ವದ ಕೇಂದ್ರ ಸರ್ಕಾರವು ತನ್ನ ದೇಶದ ನಾಗರಿಕರ ಮೇಲೆ ಬೇಹುಗಾರಿಕೆ ನಡೆಸಲು ಇಸ್ರೇಲ್ ಮೂಲದ ಸ್ಪೈವೇರ್ ಪೆಗಾಸೆಸ್ ಅನ್ನು ಪ್ರಯೋಗ ಮಾಡಿದೆ ಎಂಬ ಆರೋಪವನ್ನು ಪರಿಶೀಲನೆ ನಡೆಸಲು ಸುಪ್ರೀಮ್ ಕೋರ್ಟ್ ನ ಹಾಲಿ ನ್ಯಾಯಮೂರ್ತಿ ಆರ್.ವಿ. ರವೀಂದ್ರನ್ ಉಸ್ತುವಾರಿಯಲ್ಲಿ ಸ್ವತಂತ್ರ ತಜ್ಞರ ತಾಂತ್ರಿಕ ಸಮಿತಿಯೊಂದನ್ನು ರಚಿಸಿದೆ.

- Advertisement -

ಸದ್ಯ ಕೇಂದ್ರ ಸರ್ಕಾರ ವಿರುದ್ಧದ ಬೇಹುಗಾರಿಕಾ ಆರೋಪ ಗಂಭೀರ ಸ್ವರೂಪದದ್ದಾಗಿದ್ದು, ವಾಸ್ತವಾಂಶ ಬಹಿರಂಗವಾಗಬೇಕೆಂದು ಆದೇಶಿಸಿದ ಸಿಜೆಇ ಎನ್.ವಿ.ರಮಣ ನೇತೃತ್ವದ ಪೀಠ ನೂತನ ಸಮಿತಿಯ ವರದಿಯನ್ನು ಶೀಘ್ರವಾಗಿ ಸಲ್ಲಿಸಲು ಸೂಚಿಸಿದೆ. ಈ ಪ್ರಕರಣದ ವಿಚಾರಣೆಯನ್ನು ಎಂಟು ವಾರಗಳಿಗೆ ಮುಂದೂಡಿದೆ.

ಈ ಪ್ರಕರಣದ ಕುರಿತು ಪರಿಶೀಲನೆ ನಡೆಸಲು ರಚಿಸಲಾದ ಸಮಿತಿಯ ಉಸ್ತುವಾರಿಯನ್ನು ನ್ಯಾಯಮೂರ್ತಿ ರವೀಂದ್ರನ್ ಅವರು ನಿರ್ವಹಿಸುತ್ತಿದ್ದು, ನಿವೃತ್ತ ಐಪಿಎಸ್ ಅಧಿಕಾರಿ ಅಲೋಕ್ ಜೋಶಿ ಅವರು ನೆರವಾಗಲಿದ್ದಾರೆ. ಉಪ ಸಮಿತಿಗೆ ಅಧ್ಯಕ್ಷರಾಗಿ ಡಾ. ಸಂದೀಪ್ ಒಬೆರಾಯ್ ಅವರನ್ನು ನೇಮಿಸಲಾಗಿದೆ.
ಪ್ರಸಕ್ತ ತಾಂತ್ರಿಕ ಸಮಿತಿಯಲ್ಲಿ ಡಾ. ನವೀನ್ ಕುಮಾರ್ ಚೌಧರಿ, ಡಾ. ಪ್ರಭಾಹರನ್ ಪಿ, ಡಾ. ಅಶ್ವಿನ್ ಅನಿಲ್ ಗುಮಾಸ್ತೆ ಅವರನ್ನೊಳಗೊಂಡ ಮೂವರು ಸದಸ್ಯರನ್ನು ಒಳಗೊಂಡಿರುತ್ತಾರೆ ಎಂದು ಹೇಳಲಾಗಿದೆ.



Join Whatsapp