EVM ಅಕ್ರಮ ಸಾಗಾಟದ ಕುರಿತ ವರದಿ ಪ್ರಕಟಿಸಿದ ಪತ್ರಕರ್ತನ ಬಂಧನ; ಉತ್ತರ ಪ್ರದೇಶ ಪೊಲೀಸರಿಂದ ಚಿತ್ರಹಿಂಸೆ

Prasthutha|

ಆಗ್ರಾ: EVM ಯಂತ್ರಗಳನ್ನು ಅಕ್ರಮವಾಗಿ ಸಾಗಿಸುವ ಕುರಿತು ವರದಿಯನ್ನು ಪ್ರಕಟಿಸಿದ ಘಟನೆಗೆ ಸಂಬಂಧಿಸಿದಂತೆ ಪತ್ರಕರ್ತರೊಬ್ಬರನ್ನು ಬಂಧಿಸಿದ ಉತ್ತರ ಪ್ರದೇಶದ ಪೊಲೀಸರು ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಹೇಳಲಾಗಿದೆ.

- Advertisement -

ಸದ್ಯ ಆಗ್ರಾದ ಮತ ಎಣಿಕೆ ಕೇಂದ್ರದ ಹೊರಗೆ ಪೊಲೀಸ್ ಅಧಿಕಾರಿಗಳೊಂದಿಗೆ ಅನುಚಿತ ವರ್ತಿಸಿದ್ದಾರೆ ಎಂದು ಆರೋಪಿಸಿ ಗೌರವ್ ಬನ್ಸಾಲ್ ಎಂಬ ಪತ್ರಕರ್ತರನ್ನು ಮಾರ್ಚ್ 15 ರಂದು ಬಂಧಿಸಲಾಗಿತ್ತು.

ಮಾರ್ಚ್ 8 ರಂದು ಮತ ಎಣಿಕೆಯ ವೇಳೆ EVM ಯಂತ್ರಗಳನ್ನು ಅಕ್ರಮವಾಗಿ ಸಾಗಿಸುವ ಕುರಿತು ಬನ್ಸಾಲ್ ಅವರು ವರದಿ ಮಾಡಿದ್ದರು. ಇದರಿಂದ ಆಕ್ರೋಶಿತಗೊಂಡಿದ್ದ ಅಧಿಕಾರಿಗಳು, ಬನ್ಸಾಲ್ ವಿರುದ್ಧ ಸುಳ್ಳಾರೋಪ ಹೊರಿಸಿ ಬಂಧಿಸಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಸುಳ್ಳಾರೋಪದ ಅಡಿಯಲ್ಲಿ ಬಂಧಿತ ಬನ್ಸಾಲ್ ಅವರಿಗೆ ಮೂರನೇ ಡಿಗ್ರಿ ಮಾದರಿಯ ಚಿತ್ರಹಿಂಸೆಗೊಳಪಡಿಸಲಾಗಿದೆ ಮತ್ತು ಇಡೀ ರಾತ್ರಿ ಪೊಲೀಸರು ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ ಎಂದು ಸಂತ್ರಸ್ತ ಪರ ವಕೀಲ ಅಧರ್ ಶರ್ಮಾ ತಿಳಿಸಿದ್ದಾರೆ.

- Advertisement -

ಸದ್ಯ ಪೊಲೀಸ್ ದೌರ್ಜನ್ಯದಿಂದ ಗೌರವ್ ಬನ್ಸಾಲ್ ಅವರು ಗಂಭೀರ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದು. ಅವರ ದೇಹ ಕಂಪಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.



Join Whatsapp