ಭಗವದ್ಗೀತೆ ಚರ್ಚೆ ಅನಗತ್ಯ; ಮಕ್ಕಳ ಭವಿಷ್ಯದ ಬಗ್ಗೆ ಸರ್ಕಾರ ಗಮನ ಹರಿಸಲಿ: ಹೆಚ್ ಡಿ ಕುಮಾರಸ್ವಾಮಿ

Prasthutha|

ಹಾಸನ:  ಮಕ್ಕಳ ಬದುಕು ಕಟ್ಟಿಕೊಡಬೇಕಿರುವ ಸರ್ಕಾರ, ಮಕ್ಕಳ ಭವಿಷ್ಯಕ್ಕೆ ಪೂರಕವಾಗುವ ಅಂಶಗಳನ್ನಷ್ಟೇ ಅಳವಡಿಸಬೇಕು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.

- Advertisement -

ರಾಜ್ಯದಲ್ಲಿ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಬೋಧನೆ ಚರ್ಚೆ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರ ಜತೆ ಮಾತನಾಡಿದ ಅವರು,  ಗುಜರಾತ್ನ ಪಠ್ಯಪುಸ್ತಕದಲ್ಲಿನ ಭಗವದ್ಗೀತೆ ವಿಚಾರದಲ್ಲಿ ಇಲ್ಲೂ ಚರ್ಚೆ ಆರಂಭಿಸಿದ್ದಾರೆ. ನಮಗೆ ಬೇಕಿರುವುದು ಜನರಿಗೆ ಬದುಕು ಕಟ್ಟಿಕೊಡುವ ಕಾರ್ಯಕ್ರಮ. ರಾಜ್ಯದಲ್ಲಿ ಕೇವಲ ಮತ ಬ್ಯಾಂಕ್ಗಾಗಿ ಅನಗತ್ಯ ವಿಚಾರಗಳು ನಡೆಯುತ್ತಿವೆ ಎಂದು ಹೇಳಿದರು.

 ಹಿಂದಿನ ಕಾಲದಲ್ಲಿ  ವಿದ್ಯೆ ಒಂದು ವರ್ಗಕ್ಕೆ ಸೇರಿದ್ದು ಎಂಬ  ವಾತಾವರಣ ಇತ್ತು. ಈಗ ಅದೇ ವರ್ಗದ ಜನ ಎಲ್ಲರಿಗೂ ಕೆಲವನ್ನು ಬಲವಂತವಾಗಿ ಹೇರಲು ಹೊರಟಿದ್ದಾರೆ. ರಾಜ್ಯದ ರೈತರು ಸಹಿತ ವಿವಿಧ ವರ್ಗದ ಜನರು ಸಾಕಷ್ಟು ಸಮಸ್ಯೆಗಳಲ್ಲಿದ್ದು, ಅವುಗಳ ಬಗ್ಗೆ ಸರ್ಕಾರ ಗಮನ ಹರಿಸಲಿ. ಅದನ್ನು ಬಿಟ್ಟು ಅನಗತ್ಯಗಳಿಗೆ ಕೈ ಹಾಕುವುದು ಬೇಡ ಎಂದು ಸಲಹೆ ನೀಡಿದರು.



Join Whatsapp