ಉಕ್ರೇನಿಯನ್ನರು ಮೂರು ವರ್ಷ ಇಲ್ಲಿ ಉಳಿದುಕೊಳ್ಳಬಹುದು: ಕೆನಡಾ

Prasthutha|

ಒಟ್ಟಾವಾ: ಯುಧ್ಧಪೀಡಿತ ಉಕ್ರೇನ್ ರಾಷ್ಟ್ರದ ನಾಗರಿಕರು ಪ್ರಾಣ ರಕ್ಷಿಸುವ ಸಲುವಾಗಿ ಉಕ್ರೇನ್ ನಿಂದ ಕೆನಡಾಗೆ ಬಂದರೆ ಇಲ್ಲಿ ಮೂರು ವರ್ಷಗಳ ಕಾಲ ಉಳಿದುಕೊಳ್ಳಬಹುದು ಎಂದು ಕೆನಡಾ ರಾಜಧಾನಿ ಒಟ್ಟಾವ ತಿಳಿಸಿದೆ. ಉಕ್ರೇನ್ ನಿಂದ ಪಲಾಯನ ಮಾಡುವವರು ಕೆನಡಾದಲ್ಲಿ ಉಳಿದುಕೊಳ್ಳಲು ತಾತ್ಕಾಲಿಕ ಪರವಾನಿಗೆ ನೀಡುತ್ತೇವೆ ಎಂದು ಒಟ್ಟಾವ ತಿಳಿಸಿದೆ.

- Advertisement -

ಉಕ್ರೇನಿಯನ್ನರಿಗೆ ಮೂರು ವರ್ಷಗಳವರೆಗೆ ತಾತ್ಕಾಲಿಕ ಕೆನಡಾದ ನಿವಾಸ ಪರವಾನಿಗೆಯನ್ನು ನೀಡುವ ಹೊಸ ಯೋಜನೆಯನ್ನು ಒಟ್ಟಾವಾ ಘೋಷಿಸಿದೆ, ಅಲ್ಲದೇ ಉಕ್ರೇನಿಯನ್ನರು ತಮ್ಮ ಕೆಲಸ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದಂತೆ ಕೆನೆಡಾದಲ್ಲಿ ಅರ್ಜಿಯನ್ನು ಸಲ್ಲಿಸಬಹುದು ಎಂದು ಹೇಳಿದೆ.

ಕೆನೆಡಾ ಹೆಚ್ಚು ಉಕ್ರೇನಿಯನ್ ವಲಸೆಗಾರರನ್ನು ಹೊಂದಿದ್ದು, ವಿಶೇಷವಾಗಿ ಕೆನಡಾದ ಮಧ್ಯ ಮತ್ತು ಪಶ್ಚಿಮ ಭಾಗಗಳಲ್ಲಿ ಉಕ್ರೇನ್ ಪ್ರಜೆಗಳು ಉಳಿದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ತಾತ್ಕಾಲಿಕ ನಿವಾಸಿಗಳಾಗಿ ಉಕ್ರೇನಿಯನ್ನರು ಮೂರು ವರ್ಷಗಳವರೆಗೆ ಕೆನಡಾದಲ್ಲಿ ಉಳಿದುಕೊಳ್ಳಬಹುದು ಎಂದು ಹೇಳಿಕೆಯಲ್ಲಿ ತಿಳಿಸಿದೆ. ಏಕಕಾಲದಲ್ಲಿ ಕೆಲಸ ಮತ್ತು ಅಧ್ಯಯನ ಪರವಾನಿಗೆಗಾಗಿ ಉಕ್ರೇನಿಯನ್ ನಿರಾಶ್ರಿತರು ಅರ್ಜಿಯನ್ನು ಸಲ್ಲಿಸಬಹುದು ಎಂದು ಒಟ್ಟಾವ ತಿಳಿಸಿದೆ.



Join Whatsapp