“ದಿ ಕಾಶ್ಮೀರ್ ಫೈಲ್ಸ್’’ನಲ್ಲಿ ಅನೇಕ ಸುಳ್ಳುಗಳಿವೆ: ಒಮರ್ ಅಬ್ದುಲ್ಲಾ

Prasthutha|

ಶ್ರೀನಗರ: “ದಿ ಕಾಶ್ಮೀರ್ ಫೈಲ್ಸ್’’ಚಲನಚಿತ್ರದಲ್ಲಿ ಅನೇಕ ಸುಳ್ಳುಗಳನ್ನು ಬಿಂಬಿಸಲಾಗಿದೆ. ಅದು ಸಾಕ್ಷ್ಯಚಿತ್ರವೇ ಅಥವಾ ಚಲನಚಿತ್ರವೇ ಎಂಬುದು ಸ್ಪಷ್ಟವಾಗಿಲ್ಲ ಎಂದುಜಮ್ಮು-ಕಾಶ್ಮೀರದ  ಮಾಜಿ ಮುಖ್ಯಮಂತ್ರಿ ಒಮರ್  ಅಬ್ದುಲ್ಲಾ ಹೇಳಿದ್ದಾರೆ.

- Advertisement -

ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ರ‍್ಯಾಲಿಯೊಂದರಲ್ಲಿ ಭಾಗವಹಿಸಿ  ಮಾತನಾಡಿದ ಅವರು “ಸಿನಿಮಾವು ನೈಜತೆಯನ್ನು ಆಧರಿಸಿದೆ ಎಂದು ನಿರ್ಮಾಪಕರು ಹೇಳಿದ್ದಾರೆ. ಆದರೆ ಚಿತ್ರದಲ್ಲಿ ಹಲವು ಸುಳ್ಳುಗಳನ್ನು ಬಿಂಬಿಸಲಾಗಿದೆ. ನ್ಯಾಷನಲ್ ಕಾನ್ಫರೆನ್ಸ್ ಸರಕಾರ  ಇತ್ತು ಎಂಬುದು ದೊಡ್ಡ ಸುಳ್ಳು. 1990 ರಲ್ಲಿ ಪಂಡಿತರು ಕಾಶ್ಮೀರ ತೊರೆದಾಗ ಜಮ್ಮು-ಕಾಶ್ಮೀರದಲ್ಲಿ  ರಾಜ್ಯಪಾಲರ ಆಳ್ವಿಕೆ  ಮತ್ತು ಕೇಂದ್ರದಲ್ಲಿ ವಿ.ಪಿ. ಸಿಂಗ್ ನೇತೃತ್ವದ ಬಿಜೆಪಿ ಬೆಂಬಲಿತ ಸರಕಾರ ಇತ್ತು ಎಂದು ಹೇಳಿದರು.

ವಲಸೆಹೋಗಿರುವುದು ಅಥವಾ ಕೊಲ್ಲಲ್ಲಟ್ಟಿರುವುದು  ಕೇವಲ ಕಾಶ್ಮೀರಿ ಪಂಡಿತರು ಮಾತ್ರವಲ್ಲ.ಮುಸ್ಲಿಮರು ಮತ್ತು ಸಿಖ್ಖರು ಕೂಡ ಇದ್ದು, ವಲಸೆ ಹೋದವರು ಇನ್ನೂ ಹಿಂತಿರುಗಿಲ್ಲ. ಕಾಶ್ಮೀರಿ ಪಂಡಿತರನ್ನು ಸುರಕ್ಷಿತವಾಗಿ ಕರೆತರಲು ಎನ್‌ಸಿ ಪ್ರಯತ್ನಿಸುತ್ತಿದೆ ” ಎಂದು ಒಮರ್  ಹೇಳಿದರು.




Join Whatsapp