ಬೆಳ್ತಂಗಡಿ: ದಿನೇಶ್ ಕನ್ಯಾಡಿ ಮನೆಗೆ ದಸಂಸ (ಭೀಮವಾದ), ರಿಪಬ್ಲಿಕನ್ ಪಾರ್ಟಿ ಮುಖಂಡರ ಭೇಟಿ

Prasthutha|

ಬೆಳ್ತಂಗಡಿ: ಬಜರಂಗದಳ ಕಾರ್ಯಕರ್ತನಿಂದ ಅಮಾನುಷವಾಗಿ ಕೊಲೆಯಾದ ಬೆಳ್ತಂಗಡಿ ಕನ್ಯಾನ ಗ್ರಾಮದ ದಿನೇಶ್ ಕನ್ಯಾಡಿ ಮನೆಗೆ ದಲಿತ ಸಂಘರ್ಷ ಸಮಿತಿ ಭೀಮಾವಾದ ಸಂಘಟನೆ ಹಾಗೂ ರಿಪಬ್ಲಿಕ್ ಪಾರ್ಟಿ ಅಫ್ ಇಂಡಿಯಾ ಕರ್ನಾಟಕ ಪಕ್ಷದ ನಾಯಕರು ಬೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

- Advertisement -

ಕಳೆದ ಫೆಬ್ರವರಿ 25 ರಂದು ಬಜರಂಗದಳದ ಕಾರ್ಯಕರ್ತ ಕೃಷ್ಣ ಎಂಬಾತನು ದಿನೇಶ್ ಎನ್ನುವ ದಲಿತ ವ್ಯಕ್ತಿಗೆ ಕ್ಷುಲಕ ಕಾರಣಕ್ಕೆ ಹಲ್ಲೆ ನಡೆಸಿದ ಹಿನ್ನಲೆಯಲ್ಲಿ  ಸಾವನ್ನಾಪ್ಪಿದರು.ಘಟನೆ ನಡೆದು 21 ದಿನಗಳಾದರೂ ಸರಕಾರ ಈವರೆಗೂ ಮೃತ ವ್ಯಕ್ತಿಯ ಕುಟುಂಬಸ್ಥರಿಗೆ ಪರಿಹಾರವಾಗಲೀ ಕನಿಷ್ಟ ಪಕ್ಷ ಸಂತ್ವಾನ ಹೇಳುವ ಕೆಲಸವನ್ನಾಗಲಿ ಮಾಡಿರುವುದಿಲ್ಲ.ಹೀಗಾಗಿ ಶುಕ್ರವಾರದ ದಿನ ದಲಿತ ಸಂಘರ್ಷ ಸಮಿತಿ ಭೀಮಾವಾದ ಸಂಘಟನೆಯ ರಾಜ್ಯ ನಾಯಕರಾದ ಶೇಖರ್ ಹಾವಂಜೆ , ಉಡುಪಿ ಜಿಲ್ಲಾ ಸಂಚಾಲಕರಾದ ರಮೇಶ್ ಹರಿಖಂಡಿಗೆ, ಉಡುಪಿ ಜಿಲ್ಲಾ ಸಂಘಟನಾ ಸಂಚಾಲಕರಾದ ಸಂಜೀವ ನಾಯ್ಕ್ ಕುಕ್ಕೆಹಳ್ಳಿ.ಇವರು ದಿನೇಶ್ ಮರಾಠಿ ಮನೆಗೆ ಭೇಟಿ ನೀಡಿ ಸಂತ್ವಾನ ಹೇಳಿದರು.

- Advertisement -

ಈ ಸಂಧರ್ಭದಲ್ಲಿ ಮಾತಾನಾಡಿದ ಶೇಖರ್ ಹಾವಂಜೆ ಬಜರಂಗದಳದ ಸಂಘಟನೆಯ ಕಾರ್ಯಕರ್ತ. ದಲಿತ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವುದು ಖಂಡಾನಾರ್ಹ,ಕೊಲೆ ನಡೆದು ಇಷ್ಟು ದಿನಗಳಾದರೂ ಸರಕಾರ ಈ ಕುಟುಂಬದ ಕಡೆಗೆ ಕಣ್ಣಾಯಿಸದಿರುವುದು ನಿಜಕ್ಕೂ ನೋವಿನ ಸಂಗತಿಯಾಗಿದೆ.ಶಿವಮೊಗ್ಗದಲ್ಲಿ ಹರ್ಷ ಎನ್ನುವ ಯುವಕನ ಹತ್ಯೆಯಾದ ಬೆನ್ನಲ್ಲೆ ಸರಕಾರ ಇಪ್ಪತೈದು ಲಕ್ಷ ರೂಪಾಯಿ ಹಣ ಬಿಡುಗಡೆಗೊಳಿಸಿತ್ತು.ಅದರೆ ದಿನೇಶ್ ಕುಟುಂಬಕ್ಕೆ ಕನಿಷ್ಟ ಸಂತ್ವಾನ ಹೇಳುವ ಸೌಜನ್ಯವನ್ನು ಸರಕಾರ. ತೋರಿಸಿಲ್ಲ.ಇದು ಸರಕಾರದ ದಲಿತ ವಿರೋಧಿ ನೀತಿಯನ್ನು ಎತ್ತಿ ತೋರಿಸುತ್ತಿದೆ ಎಂದು ಅಕ್ರೋಶ ವ್ಯಕ್ತ ಪಡಿಸಿದರು.

ಸರಕಾರ ತಕ್ಷಣ ಎಚ್ಚೇತ್ತುಕೊಂಡು ದಿನೇಶ್ ಕುಟುಂಬಕ್ಕೆ ಪರಿಹಾರವನ್ನು ಘೋಷಿಸಬೇಕು.ಮತ್ತು ಮೃತ ಕುಟುಂಬಸ್ಥರಿಗೆ 5 ಎಕರೆ ಕೃಷಿ ಭೂಮಿ ಮಂಜೂರು ಮಾಡುವುದರ ಜೊತೆಗೆ ಮೂವರು ಮಕ್ಕಳ ವಿದ್ಯಾಭ್ಯಾಸಕ್ಕೆ ಬೇಕಾದಂತಹ ಎಲ್ಲಾ ವೆವಸ್ಥೆಯನ್ನು ಮಾಡಬೇಕೆಂದು ಶೇಖರ್ ಹಾವಂಜೆ  ಅಗ್ರಹಿಸಿದರು.ಈ ಸಂಧರ್ಭದಲ್ಲಿ ರಮೇಶ್ ಹರಿಖಂಡಿಗೆ,ಸಂಜೀವ ನಾಯ್ಕ್ ಕುಕ್ಕೆಹಳ್ಳಿ ,ಉಪಸ್ಥಿತರಿದ್ದರು.



Join Whatsapp