ಹೈದರಾಬಾದ್ : ತೆಲಂಗಾಣದಲ್ಲಿ ನಿರುದ್ಯೋಗ ಸಮಸ್ಯೆಯಿಂದ 40 ಲಕ್ಷ ಜನರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಹೇಳಿರುವ ಪ್ರತಿಪಕ್ಷ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ನಿರುದ್ಯೋಗ ತುರ್ತು ಪರಿಸ್ಥಿತಿ ಘೋಷಿಸುವಂತೆ ಒತ್ತಾಯಿಸಿದೆ.
ಎಐಸಿಸಿ ವಕ್ತಾರ ದಾಸೋಜು ಶ್ರವಣ್ ಕುಮಾರ್ ಮಾತನಾಡಿ, ತೆಲಂಗಾಣ ಸಮಾಜವನ್ನು ಕಾಡುತ್ತಿರುವ ನಿರುದ್ಯೋಗವನ್ನು ಎದುರಿಸಲು ನಿರ್ದಿಷ್ಟ ಕಾರ್ಯ ನೀತಿಗಳೊಂದಿಗೆ ಕಾರ್ಯತಂತ್ರವನ್ನು ರೂಪಿಸಲು ವಿವಿಧ ರಾಷ್ಟ್ರೀಯ ಮಟ್ಟದ ಕೈಗಾರಿಕೋದ್ಯಮಿಗಳು, ಶಿಕ್ಷಣ ತಜ್ಞರು, ಬುದ್ಧಿಜೀವಿಗಳು, ತಂತ್ರಜ್ಞರು, ನೀತಿ ನಿರೂಪಕರನ್ನು ಒಳಗೊಂಡ ಉನ್ನತ ಮಟ್ಟದ ಕಾರ್ಯಪಡೆಯನ್ನು ಸ್ಥಾಪಿಸಬೇಕೆಂದು ಅವರು ಮುಖ್ಯಮಂತ್ರಿಯನ್ನು ಒತ್ತಾಯಿಸಿದರು. ಇಂತಹ ಕಾರ್ಯಪಡೆಯನ್ನು ಅವಿಭಜಿತ ಆಂಧ್ರಪ್ರದೇಶದಲ್ಲಿ ಕಿರಣ್ ಕುಮಾರ್ ರೆಡ್ಡಿ ಸರ್ಕಾರ ರಚಿಸಿತ್ತು ಎಂದು ಸ್ಮರಿಸಿದರು.
ಎಸ್ ಸಿ, ಎಸ್ ಟಿ, ಬಿಸಿ, ಅಲ್ಪಸಂಖ್ಯಾತ ಹಾಗೂ ಎಂಬಿಸಿ ನಿಗಮಗಳಲ್ಲಿ ಲಕ್ಷಗಟ್ಟಲೆ ಅರ್ಜಿಗಳು ಬಾಕಿ ಉಳಿದಿದ್ದು, ಅವರ ಕಾಲ ಮೇಲೆ ನಿಲ್ಲುವಂತಾಗಲು ಕೂಡಲೇ ಸ್ವಯಂ ಉದ್ಯೋಗ ಸಾಲ ವಿತರಿಸಬೇಕು ಎಂದು ಒತ್ತಾಯಿಸಿದರು.