ಬೆಂಗಳೂರು: ಕಾಶ್ಮೀರಿ ಫೈಲ್ಸ್ ಹೇಗೆ ಪಂಡಿತರ ಮೇಲಿನ ದೌಜ೯ನ್ಯಕ್ಕೆ ಸಾಕ್ಷಿಯಾಗಿದೆಯೋ ಹಾಗೆಯೇ ಕೊಡಗಿನಲ್ಲಿ ಕೊಡವರ ಮೇಲೆ ಟಿಪ್ಪುಸುಲ್ತಾನ್, ಚಿಕ್ಕವೀರರಾಜೇಂದ್ರ ನಡೆಸಿದ ದೌಜ೯ನ್ಯದ ಬಗ್ಗೆಯೂ ಸಿನಿಮಾ ನಿಮಾ೯ಣವಾಗಲಿ ಎಂದು ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಹೇಳಿದ್ದಾರೆ.
ಕಾಶ್ಮೀರಿ ಫೈಲ್ಸ್ ಚಿತ್ರದ ಬಗೆಗಿನ ಅಭಿಪ್ರಾಯ ವ್ಯಕ್ತಪಡಿಸಿ ಖಾಸಗಿ ಟಿವಿಯೊಂದರ ಸಂವಾದದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ನಾನು ಕಾನೂನು ಸಲಹೆಗಾರನಾಗಿದ್ದೆ. ಕೊಡವರ ಮೇಲೆ ಟಿಪ್ಪು ನಡೆಸಿದ ಕ್ರೌಯ೯ದ ಬಗ್ಗೆ ತಿಳಿಹೇಳಿ, ಕೊಡಗಿನಲ್ಲಿ ಟಿಪ್ಪು ಜಯಂತಿ ಬೇಡ ಎಂದು ಸಿದ್ದರಾಮಯ್ಯರಿಗೆ ಸಲಹೆ ನೀಡಿದ್ದೆ ಎಂದು ಹೇಳಿದರು.
ಹಿಂದೂ ಸಂಘಟನೆಗಳ ಮುಖಂಡ ಪ್ರಮೋದ್ ಮುತಾಲಿಕ್, ಬ್ರಿಜೇಶ್ ಅವರ ಹೇಳಿಕೆಯನ್ನು ಶ್ಲಾಘಿಸಿ ಕೊಡವರ ಪರ ತಳೆದ ನಿಲುವು ಸ್ವಾಗತಾರ್ಹ ಎಂದು ಹೇಳಿದ್ದಾರೆ.