ಬೈಲಹೊಂಗಲದ ಜೈಲಿನಿಂದ ವಿಚಾರಣಾಧೀನ ಕೈದಿ ಪರಾರಿ

Prasthutha|

ಬೆಳಗಾವಿ: ಬೈಲಹೊಂಗಲದ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ವಿಚಾರಣಾಧೀನ ಕೈದಿಯೋರ್ವ ಪರಾರಿಯಾಗಿದ್ದಾನೆ.

- Advertisement -

ಜೈಲು ಸಿಬ್ಬಂದಿ ಗಮನ ಬೇರೆಡೆ ಸೆಳೆದು ಸಬ್ ಜೈಲಿನ ಮುಖ್ಯ ದ್ವಾರದಿಂದಲೇ ಕೈದಿ ರಾಜೇಖಾನ್ ಪರಾರಿಯಾಗಿದ್ದಾನೆ. ಜೈಲು ಸಿಬ್ಬಂದಿಯ ನಿರ್ಲಕ್ಷ್ಯ ದಿಂದ  ಕೀ ಓಪನ್ ಮಾಡಿಕೊಂಡು ವಿಚಾರಣಾಧೀನ ಕೈದಿ ಪರಾರಿ ಆಗಿದ್ದು ಹೆಚ್ಚುವರಿ ಎಸ್ಪಿ ಮಾನಿಂಗ ನಂದಗಾವಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಬೈಲಹೊಂಗಲ ಪೊಲೀಸರು ಪ್ರಕರಣ ದಾಖಲಿಸಿ ಪರಾರಿಯಾಗಿರುವ ಕೈದಿ ರಾಜೇಖಾನ್ ಪತ್ತೆಗೆ ತೀವ್ರ ಶೋಧ ನಡೆಸಿದ್ದಾರೆ.

- Advertisement -

ಅಪರಾಧ ಪ್ರಕರಣವೊಂದರ ಸಂಬಂಧಿಸಿದಂತೆ ಆರೋಪಿ ಖಾದಿರಸಾಬ್ ರಾಜೇಖಾನ್ ನನ್ನು 15 ದಿನದ ಹಿಂದೆ ಬಂಧಿಸಲಾಗಿತ್ತು. ಕೊಲೆ ಯತ್ನ, ಗಲಾಟೆ, ಜಾತಿನಿಂದನೆ ಸೇರಿದಂತೆ ಒಟ್ಟು 6 ಪ್ರಕರಣದಲ್ಲಿ ಆತ ಆರೋಪಿಯಾಗಿದ್ದ. ಇದೀಗ ಜೈಲು ಸೇರಿ 15 ದಿನಗಳಲ್ಲೇ ಆರೋಪಿ ಪರಾರಿ ಆಗಿದ್ದಾನೆ. ಪೊಲೀಸರ ಗಮನ ಬೇರೆಡೆ ಸೆಳೆದು ತಪ್ಪಿಸಿಕೊಂಡಿದ್ದಾನೆ.

Join Whatsapp