ಸಿಎಂ ಆದ ಮರುದಿನವೇ ಭ್ರಷ್ಟಾಚಾರ ವಿರೋಧಿ ಸಹಾಯವಾಣಿ ಘೋಷಿಸಿದ ಭಗವಂತ್ ಮಾನ್

Prasthutha|

ಚಂಢೀಗರ್: ಪಂಜಾಬ್ ನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮರುದಿನ, ಭಗವಂತ್ ಮಾನ್ ಅವರು ತಮ್ಮ “ವೈಯಕ್ತಿಕ ವಾಟ್ಸಾಪ್ ಸಂಖ್ಯೆ” ನಲ್ಲಿ ಭ್ರಷ್ಟಾಚಾರ ವಿರೋಧಿ ಸಹಾಯವಾಣಿಯನ್ನು ಪ್ರಾರಂಭಿಸುವುದಾಗಿ ಘೋಷಿಸಿದರು.

- Advertisement -

ಮೂರು ದಿನಗಳ ಅಸೆಂಬ್ಲಿ ಅಧಿವೇಶನದ ಮೊದಲ ದಿನದಂದು ಪಂಜಾಬ್ ನ 117 ಹೊಸದಾಗಿ ಚುನಾಯಿತ ಶಾಸಕರ ಪೈಕಿ 112 ಶಾಸಕರು ಹಂಗಾಮಿ ಸ್ಪೀಕರ್ ಇಂದರ್ ಬೀರ್ ಸಿಂಗ್ ನಿಜ್ಜರ್ ಅವರಿಂದ ಪ್ರಮಾಣ ವಚನ ಸ್ವೀಕರಿಸಿದ ದಿನದಂದು ಮಾನ್ ಈ ಘೋಷಣೆ ಬಂದಿದೆ.

ಜನರು ಲಂಚ ಕೇಳುವ ಅಧಿಕಾರಿಗಳ ಆಡಿಯೋ ಮತ್ತು ವಿಡಿಯೋ ತುಣುಕುಗಳನ್ನು ಕಳುಹಿಸಬಹುದು ಮತ್ತು “ಯಾವುದೇ ಭ್ರಷ್ಟ ಅಧಿಕಾರಿಯನ್ನು ಬಿಡಲಾಗುವುದಿಲ್ಲ” ಎಂದು ಹೇಳಿದರು.

- Advertisement -

ಮಾರ್ಚ್ 23 ರಂದು ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರ ಪುಣ್ಯತಿಥಿಯಂದು ಸಹಾಯವಾಣಿಯನ್ನು ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದರು.



Join Whatsapp