ರಾಜ್ಯದಲ್ಲಿ ಕಳೆದ 2 ವರ್ಷಗಳಲ್ಲಿ 188 ಕಸ್ಟಡಿ ಸಾವು: ಗುಜರಾತ್ ಸರಕಾರ

Prasthutha|

ಗಾಂಧಿನಗರ: ರಾಜ್ಯದಲ್ಲಿ ಕಳೆದ ಎರಡು ವರ್ಷಗಳಲ್ಲಿ 188 ಕಸ್ಟಡಿ ಸಾವಿನ ಪ್ರಕರಣಗಳು ವರದಿಯಾಗಿವೆ ಎಂದು ಗುಜರಾತ್ ಸರಕಾರ ಗುರುವಾರ ತಿಳಿಸಿದೆ.

- Advertisement -

ವಿಧಾನಸಭೆಯಲ್ಲಿ ಲಿಖಿತ ಉತ್ತರದಲ್ಲಿ ಸರಕಾರವು ಈ ಕುರಿತು ಮಾಹಿತಿ ನೀಡಿದ್ದು, ಕಾಂಗ್ರೆಸ್ ಶಾಸಕ ಪರೇಶ್ ಧನಾನಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, 2020 ರಲ್ಲಿ 88 ಕಸ್ಟಡಿ ಸಾವಿನ ಘಟನೆಗಳು ನಡೆದಿದ್ದರೆ, 2021 ರಲ್ಲಿ 100 ಪ್ರಕರಣಗಳು ವರದಿಯಾಗಿವೆ ಎಂದು ಸದನಕ್ಕೆ ತಿಳಿಸಿದರು.

ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಸರಕಾರ ಕೈಗೊಂಡ ಕ್ರಮಗಳ ಕುರಿತ ಉಪ-ಪ್ರಶ್ನೆಗೆ ಉತ್ತರಿಸಿದ ಪಟೇಲ್, ರಾಜ್ಯ ಸರಕಾರವು ಎಫ್ ಐಆರ್ಗಳನ್ನು ದಾಖಲಿಸಿದೆ, ಇಲಾಖಾ ವಿಚಾರಣೆಗಳನ್ನು ಆರಂಭಿಸಿದೆ, ಅಮಾನತು ಆದೇಶಗಳನ್ನು ನೀಡಿದೆ ಮತ್ತು ಅಂತಹ ಅಧಿಕಾರಿಗಳಿಗೆ ನಗದು ದಂಡವನ್ನು ವಿಧಿಸಿದೆ ಎಂದು ತಿಳಿಸಿದರು.



Join Whatsapp