ಸುಳ್ಯ | KSRTC ಬಸ್ ಅಪಘಾತ: ಹಲವರು ಗಾಯ

Prasthutha|

ಸುಳ್ಯ: KSRTC ಬಸ್’ನ ಮುಂಭಾಗದ ಟಯರ್ ಸ್ಫೋಟಗೊಂಡ ಪರಿಣಾಮ ಬಸ್  ಸಮೀಪದ ಹೊಳೆಗೆ ಉರುಳಿಬಿದ್ದ ಘಟನೆ ಸುಳ್ಯ ಸಮೀಪದ ಸಂಪಾಜೆಯಲ್ಲಿ ನಡೆದಿದೆ.

- Advertisement -

ಮಂಗಳೂರಿನಿಂದ ಮಡಿಕೇರಿಗೆ ತೆರಳುತ್ತಿದ್ದ KSRTC ಬಸ್, ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಸಂಪಾಜೆಯ ಗಡಿಕ್ಕಲು ಎಂಬಲ್ಲಿ ಹೊಳೆಗೆ ಪಲ್ಟಿಯಾಗಿದೆ.

 ಬಸ್’ನಲ್ಲಿದ್ದ ಹಲವು ಪ್ರಯಾಣಿಕರಿಗೆ ಗಾಯಗಳಾಗಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಸುಳ್ಯದ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -



Join Whatsapp