ಪಿಲ್ಲರ್ಗೆ ಟಿಪ್ಪರ್ ಲಾರಿ ಡಿಕ್ಕಿ; ಹತ್ತಿದ ಬೆಂಕಿಗೆ ಚಾಲಕ ಸಜೀವ ದಹನ

Prasthutha|

ಮಂಡ್ಯ: ಪಿಲ್ಲರ್ಗೆ ಡಿಕ್ಕಿ ಹೊಡೆದ ಟಿಪ್ಪರ್ ಲಾರಿ ಹೊತ್ತಿ ಉರಿದು ಅದರಲ್ಲಿ ಸಿಲುಕಿದ ಚಾಲಕ ಸಜೀವ ದಹನವಾಗಿರುವ ದಾರುಣ ಘಟನೆ ಮದ್ದೂರಿನ ಎಲ್.ಐ.ಸಿ ಕಚೇರಿ ಮುಂಭಾಗದಲ್ಲಿ ನಡೆದಿದೆ.

- Advertisement -

ಮೃತ ಚಾಲಕನನ್ನು ಹಾಸನ ಮೂಲದ ದಿನೇಶ್ ಎಂದು ಗುರುತಿಸಲಾಗಿದೆ.

ಬಿಡದಿಯಿಂದ ಮೈಸೂರಿಗೆ ತೆರಳುತ್ತಿದ್ದ ಟಿಪ್ಪರ್ ಲಾರಿ ಮದ್ದೂರಿನ ಎಲ್.ಐ.ಸಿ ಕಚೇರಿ ಬಳಿ ಪಿಲ್ಲರ್ಗೆ ಡಿಕ್ಕಿಯಾಗಿದೆ.

- Advertisement -

ಡಿಕ್ಕಿಯ ರಭಸಕ್ಕೆ ಲಾರಿ ಮುಂದಿನ ಭಾಗ ನಜ್ಜುಗುಜ್ಜಾದ ಹಿನ್ನೆಲೆಯಲ್ಲಿ ಚಾಲಕ ಲಾರಿಯಲ್ಲೇ ಸಿಲುಕಿದ್ದು, ಈ ವೇಳೆ ಬೆಂಕಿ ಹೊತ್ತಿಕೊಂಡಿದೆ. ಸಂಪೂರ್ಣ ಲಾರಿ ಸುಟ್ಟುಕರಲಾಗಿದ್ದು, ಚಾಲಕನೂ ಸಾವನ್ನಪ್ಪಿದ್ದಾರೆ.

ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ಆರಿಸಿ ಚಾಲಕನ ಮೃತದೇಹ ಹೊರತೆಗೆದು  ಮದ್ದೂರು ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.

ಘಟನೆ ಹಿನ್ನೆಲೆ ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿದ್ದು, ಟಿಪ್ಪರ್ ಪಕ್ಕಕ್ಕೆ ಸರಿಸಿ ಸಂಚಾರಕ್ಕೆ ಪೊಲೀಸರು ಅನುವು ಮಾಡಿಕೊಟ್ಟಿದ್ದಾರೆ. ಮದ್ದೂರು ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.



Join Whatsapp