ಭಗವಂತ್ ಮಾನ್ ಪಂಜಾಬ್ ನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ

Prasthutha|

ಚಂಡೀಗಡ್: ಪಂಜಾಬ್ ವಿಧಾನಸಭೆ ಚುನಾವಣೆ ಯಲ್ಲಿ ಭರ್ಜರಿ ಬಹುಮತ ಪಡೆದಿರುವ ಆಮ್ ಆದ್ಮಿ ಪಕ್ಷದ ಭಗವಂತ್ ಮಾನ್ ಇಂದು ಪಂಜಾಬ್ನ 18ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು.

- Advertisement -

ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಗ್ರಾಮವಾದ, ಪಂಜಾಬ್ ನ ಖಟ್ಕರ್ಕಲಾ ನಲ್ಲಿ ಈ ಸಮಾರಂಭ ಅದ್ದೂರಿಯಾಗಿ ನಡೆಯಿತು. ಸದ್ಯ ಭಗವಂತ್ ಮಾನ್ ಒಬ್ಬರೇ ಪ್ರಮಾಣ ವಚನ ಸ್ವೀಕರಿಸಿದ್ದು, ಅವರ ಕ್ಯಾಬಿನೆಟ್ ಸಚಿವರು ಇನ್ನು ಕೆಲವೇ ದಿನಗಳಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.

ಪಂಜಾಬ್ ನೂತನ ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ, ಕಾಂಗ್ರೆಸ್ ನಾಯಕ ಮನೀಶ್ ತಿವಾರಿ, ಸಮಾಜವಾದಿ ಪಾರ್ಟಿ ಮುಖ್ಯಸ್ಥ ಅಖಿಲೇಶ್ ಯಾದವ್, ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಸೇರಿ ಅನೇಕರು ಶುಭಹಾರೈಸಿದ್ದಾರೆ.ಹಾಗೇ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಶುಭಕೋರಿದ್ದು, ಭಾರತೀಯ ಒಕ್ಕೂಟದಲ್ಲಿ ಭಾಷಾವಾರು ಹಕ್ಕುಗಳು ಮತ್ತು ರಾಜ್ಯದ ಹಕ್ಕುಗಳ ಬಗ್ಗೆ ಧ್ವನಿ ಎತ್ತಿರುವ ರಾಜ್ಯಗಳು ತಮಿಳುನಾಡು ಮತ್ತು ಪಂಜಾಬ್. ಈ ವಿಚಾರಗಳಲ್ಲಿ ಎರಡೂ ರಾಜ್ಯಗಳು ಸುದೀರ್ಘ ಇತಿಹಾಸ ಹೊಂದಿವೆ ಎಂದು ಹೇಳಿದ ಸ್ಟಾಲಿನ್, ಪಂಜಾಬ್ನ ಹೊಸ ಸರ್ಕಾರ ಅತ್ಯುತ್ತಮವಾಗಿ ಆಡಳಿತ ನಡೆಸಲಿ ಎಂದು ಹಾರೈಸಿದ್ದಾರೆ.



Join Whatsapp