ಉಡುಪಿ ವಿದ್ಯಾರ್ಥಿನಿಯರ ಬಗ್ಗೆ ಯಶಪಾಲ ಸುವರ್ಣ ವಿವಾದಾತ್ಮಕ ಹೇಳಿಕೆ

Prasthutha|

►ಸಮಾನ ನಾಗರಿಕ ಸಂಹಿತೆ, ಹಿಂದೂ ರಾಷ್ಡ್ರ ನಿರ್ಮಾಣ ನಮ್ಮ ಮುಂದಿನ ಗುರಿ ಎಂದ ಬಿಜೆಪಿ ಮುಖಂಡ

- Advertisement -

ಉಡುಪಿ: ಉಡುಪಿ ವಿದ್ಯಾರ್ಥಿನಿಯರು ಟೆರೆರಿಸ್ಟ್ ಸಂಘಟನೆಯ ಸದಸ್ಯರು ಎಂದು ಉಡುಪಿ ಸರ್ಕಾರಿ ಪದವಿ ಪೂರ್ವ  ಹೆಣ್ಣು ಮಕ್ಕಳ ಕಾಲೇಜು ಆಡಳಿತ ಮಂಡಳಿ ಉಪಾಧ್ಯಕ್ಷ ಯಶಪಾಲ ಸುವರ್ಣ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈಕೋರ್ಟ್ ಆದೇಶದಿಂದ ವಿವಾದಕ್ಕೆ ತೆರೆ ಬಿದ್ದಿದೆ. ಅಂಬೇಡ್ಕರ್ ಬರೆದ ಸಂವಿಧಾನದ ಚೌಕಟ್ಟಿನಲ್ಲಿ ತೀರ್ಪು ಬಂದಿದೆ. ನ್ಯಾಯಾಂಗ, ಸಂವಿಧಾನದ ಎದುರು ಯಾವುದೇ ಧರ್ಮ ಮುಖ್ಯವಲ್ಲ. ಆಡಳಿತ ಮಂಡಳಿ ನಿರ್ಣಯ ವಿರುದ್ದ ಕೋರ್ಟ್ ಗೆ ಹೋಗಿದ್ದರು. ಇದು ಕಾನೂನು ವಿರೋಧ, ರಾಜಕೀಯ ಪ್ರೇರಿತ ಎಂದು ಆರೋಪಿಸಿದರು.

- Advertisement -

ನ್ಯಾಯಾಂಗ ವ್ಯವಸ್ಥೆಗೆ ಅಗೌರವ ವರ್ತನೆ ತೋರಿದ್ದಾರೆ. ನ್ಯಾಯಾಂಗ ವ್ಯವಸ್ಥೆಯನ್ನೇ ಪ್ರಶ್ನೆ ಮಾಡುತ್ತಾರೆ. ಈ ವಿದ್ಯಾರ್ಥಿನಿಯರು ದೇಶದಲ್ಲಿ ಉಳಿಯಲು ಅರ್ಹರಲ್ಲ. ಇವರು ಟೆರೆರಿಸ್ಟ್ ಸಂಘಟನೆಯ ಸದಸ್ಯರೆಂಬುದು ಸಾಬೀತಾಗಿದೆ. ಈ ಬಗ್ಗೆ ಹಿಂದೆಯೇ ಆರೋಪ ಮಾಡಿದ್ದೆ. ಅವರಿಗೆ ಧರ್ಮಪಾಲನೆಗೆ ಅವಕಾಶ ಇರುವ ದೇಶಕ್ಕೆ ಹೋಗಲಿ ಎಂದು ಹೇಳಿದರು

ಸಿಎಫ್ ಐನ ಪೇಯ್ಡ್ ನಾಯಕರು ಸಾಕಷ್ಟು ಹೇಳಿಕೆ ನೀಡುತ್ತಿದ್ದರು. ಆದೇಶ ಬಂದ ನಂತರ ಬೇರೆಯದೇ ಮಾತನಾಡುತ್ತಿದ್ದಾರೆ. ಕರಾವಳಿಯಲ್ಲಿ ಅಶಾಂತಿ ಹರಡುವುದು ಇವರ ಉದ್ದೇಶ. ಸಿಎಫ್ ಐ , ಪಿಎಫ್ ಐ ಅನ್ನು  ಕಿತ್ತು ಹಾಕುತ್ತೇವೆ ಎಂದರು.

ಸಿದ್ದರಾಮಯ್ಯ ಕೇಸರಿ ತೊಡಿಸಲು ಬಂದರೆ  ಕಿತ್ತು ಹಾಕುತ್ತಾರೆ. ಆದರೆ ಉರೂಸ್ ನಲ್ಲಿ ಮುಸ್ಲಿಮ್ ಸಂಕೇತದ ಟೊಪ್ಪಿ ಧರಿಸುತ್ತಾರೆ. ಕಾನೂನು ಗೌರವಿಸುವವರಿಗೆ ಮಾತ್ರ ಕಾಲೇಜಿನಲ್ಲಿ ಅವಕಾಶ.  ಸಮಾನ ನಾಗರಿಕ ಸಂಹಿತೆ, ಹಿಂದೂ ರಾಷ್ಡ್ರ ನಿರ್ಮಾಣ ನಮ್ಮ ಮುಂದಿನ ಉದ್ದೇಶ ಎಂದು ಹೇಳಿದರು.



Join Whatsapp