ಹಿಜಾಬ್; ಕೋರ್ಟ್ ತೀರ್ಪು ಮರುಪರಿಶೀಲಿಸಬೇಕು: ಕೇರಳ ಮುಸ್ಲಿಂ ಜಮಾಅತ್

Prasthutha|

ಮಲಪ್ಪುರಂ: ಹಿಜಾಬ್ ಇಸ್ಲಾಮಿನ ಪ್ರಮುಖ ಭಾಗವಾಗಿದ್ದು, ಇದಕ್ಕೆ ವಿರುದ್ಧವಾಗಿರುವ  ಕರ್ನಾಟಕ ಹೈಕೋರ್ಟ್ ತೀರ್ಪು ದುರದೃಷ್ಟಕರ ಎಂದು ಕೇರಳ ಮುಸ್ಲಿಂ ಜಮಾಅತ್ ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ಇಬ್ರಾಹಿಮುಲ್ ಖಲೀಲ್ ಅಲ್-ಬುಖಾರಿ ಹೇಳಿದರು.

- Advertisement -

ಹಿಜಾಬ್ ಮುಸ್ಲಿಂ ಹೆಣ್ಣಿನ ಮೂಲಭೂತ ಹಕ್ಕು. ಅದು ಇತರರ ಸ್ವಾತಂತ್ರ್ಯಕ್ಕೆ ಧಕ್ಕೆಯುಂಟುಮಾಡುವುದಿಲ್ಲ. ಆದ್ದರಿಂದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಮರುಪರಿಶೀಲಿಸಬೇಕು ಎಂದು ಒತ್ತಾಯಿಸಿದರು.

ಭಾರತದ ಪ್ರತಿಯೊಬ್ಬ ನಾಗರಿಕನಿಗೆ ತನಗೆ ಇಷ್ಟವಾದುದನ್ನು ಧರಿಸುವ ಮತ್ತು ತಿನ್ನುವ ಹಕ್ಕನ್ನು ಭಾರತದ ಸಂವಿಧಾನವು ನೀಡಿದೆ. ನಂಬಿಕೆಗಳು ಮತ್ತು ಸಂಪ್ರದಾಯಗಳು ಎಲ್ಲಿಯವರೆಗೆ ಇತರರ ಸ್ವಾತಂತ್ರ್ಯಕ್ಕೆ ಹಾನಿಯುಂಟುಮಾಡುವುದಿಲ್ಲವೋ ಅಲ್ಲಿಯವರೆಗೆ ಅವುಗಳನ್ನು ಅನುಮತಿಸುವುದು ಸಂವಿಧಾನದ 25ನೇ ಪರಿಚ್ಛೇದದ ಸಾರಾಂಶವಾಗಿದೆ. ಬದಲಾಗಿ, ಪ್ರತಿಯೊಂದು ಸಂಪ್ರದಾಯವನ್ನು ನ್ಯಾಯಾಲಯವು ಪರಿಶೀಲಿಸಿದಾಗ ಮತ್ತು ವಿಲೇವಾರಿ ಮಾಡಿದಾಗ, ಆಯ್ಕೆಯ ಧರ್ಮವನ್ನು ಅನುಸರಿಸುವ ಸಾಂವಿಧಾನಿಕ ಭರವಸೆಯನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಹೇಳಿದರು.

- Advertisement -

ಇಂತಹ ತೀರ್ಪಿನ ಹಿನ್ನೆಲೆಯಲ್ಲಿ, ಕ್ಯಾಂಪಸ್ ನ ಒಳಗೆ ಮತ್ತು ಹೊರಗೆ ಹೆಣ್ಮಕ್ಕಳು ಹಲ್ಲೆಗೆ ಒಳಗಾಗುವ ಸಾಧ್ಯತೆಯಿದೆ. ಈ ಬಗ್ಗೆ ಸರ್ಕಾರ ಅತ್ಯಂತ ಜಾಗರೂಕವಾಗಿರಬೇಕು ಎಂದು ಅವರು ಹೇಳಿದರು.



Join Whatsapp