ಬ್ಯಾರಿ ಸಾಹಿತ್ಯ ಅಕಾಡೆಮಿಯಿಂದ ಆಕರ್ಷಕ ಬ್ಯಾರಿ ತಾಲೀಮು ಜಲ್ಸ್

Prasthutha|

ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಎಮ್.ಜಿ.ಎಮ್ ತಾಲೀಮು ಸ್ಫೋಟ್ಸ್   ಗುರುಪುರ ಇದರ ಸಹಕಾರದಲ್ಲಿ “ಬ್ಯಾರಿ ತಾಲೀಮು ಜಲ್ಸ್ -2022 “ಕಾರ್ಯಕ್ರಮವು ಗುರುಪುರ ಕೈಕಂಬದಲ್ಲಿ ನಡೆಯಿತು.

- Advertisement -

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬ್ಯಾರಿ ಅಕಾಡೆಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಮಾತನಾಡಿ, ಸರ್ಕಾರ ಬದಲಾದಾಗ ಅಕಾಡೆಮಿ ಅಧ್ಯಕ್ಷರು ಬದಲಾಗ್ತಾರೆ. ಆದರೆ ಅಕಾಡೆಮಿ ಪಕ್ಷದ್ದಾಗಿರುವುದಿಲ್ಲ. ಸರ್ಕಾರದ ಅಕಾಡೆಮಿ ಆಗಿರುತ್ತದೆ. ನಾನು ಈವರೆಗೂ ಅಕಾಡೆಮಿಯಲ್ಲಿ ರಾಜಕೀಯ ಮಾಡಿಲ್ಲ. ಕೋರೊನದಂತಹ ಸಂದಿಗ್ದ ಪರಿಸ್ಥಿಯಲ್ಲಿ 140 ಮಂದಿ  ಸಾಹಿತಿಗಳಿಗೆ ಆಹಾರದ ಕಿಟನ್ನು , 350 ಮಂದಿಗೆ ಧನಸಹಾಯ ಮಾಡಿದ್ದೀವಿ. ಅಕಾಡೆಮಿ ಭಾಷೆ, ಸಂಸ್ಕೃತಿ, ಕಲೆ, ಸಾಹಿತ್ಯದ ಬೆಳವಣಿಗೆಗೆ ಇರುವುದು ಎಂದರು. 

ಇನ್ನು 6 ನೇ ತರಗತಿಯಿಂದ ತೃತೀಯ ಐಚ್ಚಿಕ ಭಾಷೆಯಾಗಿ ಪರಿಗಣಿಸಲು ಸರ್ಕಾರಕ್ಕೆ ಮನವಿ ಮಾಡಿದ್ದು  ಇದರ ಕೆಲಸ ನಡೆಯುತ್ತಿದೆ. ಅಲ್ಲದೇ ಬ್ಯಾರಿ ಜಾನಪದ ಕಲೆಗಳ ಡಿಫ್ಲೋಮಾ ಕೋರ್ಸ್ ಆರಂಭ ಮಾಡಿದ್ದೇವೆ ಅಂದರು. ಎಸ್.ವೈ.ಎಸ್ ಯುನಿಟ್, ಗುರುಪುರ ಕೈಕಂಬದ ಅಧ್ಯಕ್ಷ ಎಮ್.ಹೆಚ್. ಮೊಹಿಯುದ್ದೀನ್ ಹಾಜಿ ಅಡ್ಡೂರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

- Advertisement -

ಗುರುಪುರ ಗ್ರಾಮ ಪಂಚಾಯತ್ ನ ಅಧ್ಯಕ್ಷ ಯಶವಂತ ಶೆಟ್ಟಿ , ಬಹುಭಾಷಾ ಕವಿ ಮಹಮ್ಮದ್ ಬಡ್ಡೂರು,  ಗಂಜಿಮಠ ಗ್ರಾಮ ಪಂಚಾಯತ್ ನ ಅಧ್ಯಕ್ಷ ನೋಣಯ್ಯ ಕೋಟ್ಯಾನ್ , ಗುರುಪುರ ಗ್ರಾಮ ಪಂಚಾಯತ್ ಸದಸ್ಯರಾಜೇಶ್ ಕುಮಾರ್ , ಗ್ರಾಮ ಪಂಚಾಯತ್ ಸದಸ್ಯ ಎ.ಕೆ ರಿಯಾಜ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ ಲಯನ್ ಇ.ಕೆ.ಎ ಸಿದ್ದೀಕ್ ಅಡ್ಡೂರು, ಇಬ್ರಾಹಿಂ ಸಮಾಜ ಸೇವಕ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಯು.ಪಿ.ಇಬ್ರಾಹಿಂ ಬಜ್ಪೆ, ಅಖಿಲ ಭಾರತ ಬ್ಯಾರಿ ಪರಿಷತ್ ನ ಅಧ್ಯಕ್ಷ ಜಿ.ಎಮ್ .ಶಾಹುಲ್ ಹಮೀದ್ ಹಾಜಿ ಮೆಟ್ರೋ, ಸಮಾಜ ಸೇವಕರು ಹಾಗೂ ಉದ್ಯಮಿ ಗುರುಪುರ ಅಬ್ದುಲ್ ಲತೀಫ್,  ಮದರಸ ಮ್ಯಾನೇಜ್ ಮೆಂಟ್ ಗುರುಪುರ ರೇಂಜ್ ನ ಅಧ್ಯಕ್ಷ ಹಾಗೂ ಸಮಾಜ ಸೇವಕ ನೌಶಾದ್ ಹಾಜಿ, ಆದರ್ಶ್ ಗ್ರೂಪ್ ಆಫ್ ಇನ್ಸಿಟ್ಯೂಷನ್ ನಿರ್ದೇಶಕ ಹಾಗೂ ಸಮಾಜ ಸೇವಕ ಆಸಿಫ್ ಸೂರಲ್ಪಾಡಿ , ಉಮ್ಮಗ್ ಒರು ಅಗ ಸಂಸ್ಥೆಯ ಅಧ್ಯಕ್ಷ ಮುಸ್ತಫ ಇಂಜಿನಿಯರ್ ದೆಮ್ಮಲೆ ಅಡ್ಡೂರು, ತಕ್ವಿಯತುಲ್ ಇಸ್ಲಾಂ ಮದರಸದ ಅಧ್ಯಕ್ಷ  ಅನ್ಸಾರ್ ಇಂಜಿನಿಯರ್ ಅದ್ಯಪಾಡಿ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.



Join Whatsapp