ಮಂಗಳೂರು: ನಿಷೇಧಾಜ್ಞೆ ಹಿನ್ನೆಲೆ; ನಗರದಲ್ಲಿ ಪೊಲೀಸ್ ಪಥ ಸಂಚಲನ, ಸಂಯಮ ಪಾಲಿಸಲು ಕಮಿಷನರ್ ಸೂಚನೆ

Prasthutha|

ಮಂಗಳೂರು: ಕಮಿಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹಿನ್ನೆಲೆ ನಗರದಾದ್ಯಂತ ಪೊಲೀಸ್ ಪಥ ಸಂಚಲನ ನಡೆಯಿತು.
ನಗರದ ಕದ್ರಿಯ ಸರ್ಕ್ಯೂಟ್ ಹೌಸ್ ನಿಂದ ಹೊರಟು ಲಾಲ್ ಬಾಗ್, ಪಿವಿಎಸ್ ಮಾರ್ಗವಾಗಿ ಹಂಪನಕಟ್ಟೆವರೆಗೆ ಪಥ ಸಂಚಲನ ನಡೆಯಿತು.

- Advertisement -

ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಮುಂದಾಳತ್ವದಲ್ಲಿ ನಡೆದ ಪಥ ಸಂಚಲನದಲ್ಲಿ ಸುಮಾರು 400 ಕ್ಕೂ ಅಧಿಕ ಸಿಬ್ಬಂದಿಗಳು ಹಾಜರಿದ್ದರು.

ಪ್ರತಿಯೋರ್ವ ಅಧಿಕಾರಿ ಸಿಬ್ಬಂದಿಗಳು ಸಂಯಮದಿಂದ ವರ್ತಿಸುವಂತೆ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸೂಚನೆ ನೀಡಿದರು.



Join Whatsapp