‘ಚಿತ್ರಾ ರಾಮಕೃಷ್ಣ VIP ಖೈದಿ ಅಲ್ಲ, ವಿಶೇಷ ಸವಲತ್ತುಗಳನ್ನು ನೀಡಲು ಸಾಧ್ಯವಿಲ್ಲ’: ದೆಹಲಿ ಕೋರ್ಟ್

Prasthutha|

ನವದೆಹಲಿ: ಅಧಿಕಾರ ದುರುಪಯೋಗ ಆರೋಪದಲ್ಲಿ ಸಿಬಿಐ ವಶದಲ್ಲಿರುವ ರಾಷ್ಟ್ರೀಯ ಷೇರು ಮಾರುಕಟ್ಟೆ [NSE]ಯ ಮಾಜಿ ಮುಖ್ಯಸ್ಥೆ ಚಿತ್ರಾ ರಾಮಕೃಷ್ಣಗೆ ಸಿಬಿಐ ವಿಶೇಷ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಇದೇ ವೇಳೆ ಮನೆಯ ಆಹಾರ ಮತ್ತು ಇತರ ಸೌಕರ್ಯಗಳಿಗಾಗಿ ಚಿತ್ರಾ ರಾಮಕೃಷ್ಣ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯವು ತಿರಸ್ಕರಿಸಿತು.

- Advertisement -

“ಖೈದಿಗಳೆಲ್ಲರೂ ಸಮಾನರು. ಚಿತ್ರಾ ಅವರು ವಿಐಪಿ ಖೈದಿಯಾಗಲು ಸಾಧ್ಯವಿಲ್ಲ. ತಿಹಾರ್ ಜೈಲಿನಲ್ಲಿ 70 ವರ್ಷ ದಾಟಿದ ಖೈದಿಗಳೂ ಇದ್ದಾರೆ. ಎಲ್ಲರಿಗೂ ಒಂದೇ ಆಹಾರ ನೀಡಲಾಗುತ್ತದೆ. ನಾನು ಕೂಡ ತಿಹಾರ್ ಜೈಲಿನ ಆಹಾರ ಸೇವಿಸಿದ್ದೇನೆ.ಉತ್ತಮ ಆಹಾರವನ್ನು ನೀಡಲಾಗುತ್ತದೆ ಎಂಬುದು ನನಗೆ ಮನವರಿಕೆಯಾಗಿದೆ. VIP ಖೈದಿಗಳು ಜೈಲಿನಲ್ಲಿ ಎಲ್ಲವನ್ನೂ ಬಯಸುತ್ತಾರೆ, ಆದರೆ ಎಲ್ಲಾ ಖೈದಿಗಳು ಸಮಾನರಾಗಿದ್ದಾರೆ. ನಿಯಮಗಳನ್ನು ಬದಲಾಯಿಸಲು ಸಾಧ್ಯವಿಲ್ಲ” ಎಂದು ನ್ಯಾಯಾಧೀಶರಾದ ಸಂಜೀವ್ ಅಗರ್ವಾಲ್ ತೀರ್ಪು ನೀಡುವ ವೇಳೆ ಉಲ್ಲೇಖಿಸಿದ್ದಾರೆ. ಆದರೆ ಚಿತ್ರಾ ಅವರ ಕೋರಿಕೆಯ ಪೈಕಿ ಹನುಮಾನ್ ಚಾಲೀಸಾ ಮತ್ತು ಭಗವದ್ಗೀತೆಯ ಪ್ರತಿಯನ್ನು ಕೊಂಡೊಯ್ಯಲು ಅನುಮತಿ ನೀಡಿತು.

ದೆಹಲಿ ಮೂಲದ ಸ್ಟಾಕ್ ಬ್ರೋಕರ್ ವಿರುದ್ಧ ನಾಲ್ಕು ವರ್ಷಗಳ ತನಿಖೆಯ ಬಳಿಕ ಚಿತ್ರಾ ರಾಮಕೃಷ್ಣರನ್ನು ಸಿಬಿಐ ಬಂಧಿಸಿದೆ. ಮಾರುಕಟ್ಟೆ ನಿಯಂತ್ರಕ ಸೆಕ್ಯೂರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ವರದಿಯಲ್ಲಿ ಎನ್‌ಎಸ್‌ಇಯ ಉನ್ನತ ಮಂಡಳಿಯಿಂದ ಅಧಿಕಾರದ ದುರುಪಯೋಗಿರುವುದು ಸಾಬೀತಾಗಿತ್ತು. ಚಿತ್ರಾ ರಾಮಕೃಷ್ಣ ಅವರು ಸುಮಾರು 20 ವರ್ಷಗಳ ಕಾಲ ಎಲ್ಲ ವೈಯಕ್ತಿಕ ಮತ್ತು ವೃತ್ತಿಪರ ವಿಷಯಗಳಲ್ಲಿ ನಿಗೂಢ “ಹಿಮಾಲಯನ್ ಯೋಗಿ” ಅವರಿಂದ ಮಾರ್ಗದರ್ಶನ ಪಡೆದಿದ್ದಾರೆ ಎಂದು ವರದಿ ಹೇಳಿದೆ. ಆ ನಂತರ “ಯೋಗಿ”ಯೇ ಆನಂದ್ ಸುಬ್ರಮಣಿಯನ್ ಎಂದು ಬಹಿರಂಗಪಡಿಸಲಾಗಿದ್ದು, ಮಾರುಕಟ್ಟೆ ತಿರುಚಿದ ಪ್ರಕರಣದಲ್ಲಿ ವಿನಿಮಯ ಕೇಂದ್ರದ ಮಾಜಿ ಅಧಿಕಾರಿಯನ್ನು ಬಂಧಿಸಲಾಗಿದೆ.



Join Whatsapp