ಮಂಗಳೂರು | ವೆನ್‍ಲಾಕ್‍ ಆಸ್ಪತ್ರೆಯಲ್ಲಿ ಅಗ್ನಿ ಸುರಕ್ಷತೆಯ ಅಣಕು ಪ್ರದರ್ಶನ

Prasthutha|

ಮಂಗಳೂರು: ಜಿಲ್ಲಾ ವೆನ್‍ಲಾಕ್ ಆಸ್ಪತ್ರೆಯ ಪ್ರಾದೇಶಿಕ ಮಕ್ಕಳ ಆರೋಗ್ಯ ಕೇಂದ್ರದ ಆವರಣದಲ್ಲಿ ಬೆಂಕಿ ಅವಘಡದ ಅಣಕು ಪ್ರದರ್ಶನವನ್ನು ಮಾ.11 ರಂದು ಬೆಳಿಗ್ಗೆ 10.30 ಜಿಲ್ಲಾ ಅಗ್ನಿ ಅಧಿಕಾರಿ ಭರತ್ ಕುಮಾರ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.

- Advertisement -

ಬೆಂಕಿಯನ್ನು ಅಗ್ನಿಶಾಮಕ ಸಾಧನದ ಮೂಲಕ 2ನೇ ಮಹಡಿಯನ್ನು ನಂದಿಸುವುದರ ಜೊತೆಗೆ ರೋಗಿಗಳನ್ನು ತುರ್ತಾಗಿ ನೆಲ ಮಹಡಿಗೆ ಕರೆ ತಂದು, ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಅಂಬ್ಯುಲೆನ್ಸ್ ಮೂಲಕ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಬೆಂಕಿ ಅವಘಡ ಸಂಭವಿಸಿದಾಗ ಬೆಂಕಿ ನಂದಿಸುವ ವಿಧಾನಗಳು, ಆಸ್ಪತ್ರೆಯ ಸಿಬ್ಬಂದಿಗಳು ಬೆಂಕಿ ನಂದಿಸುವುದರಲ್ಲಿ ವಹಿಸಬಹುದಾದ ಪಾತ್ರಗಳು ಹಾಗೂ ಆ ಸಂದರ್ಭದಲ್ಲಿ ತುರ್ತಾಗಿ ಮಾಡಬಹುದಾದ ಕ್ರಮಗಳ ಬಗ್ಗೆ ಭರತ್ ಕುಮಾರ್ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಟ್ಟರು.

- Advertisement -

ಜಿಲ್ಲಾ ಶಸ್ತ್ರಚಿಕಿತ್ಸಕರು ಮತ್ತು ವೆನ್‍ಲಾಕ್ ಅಧೀಕ್ಷಕ ಡಾ. ಸದಾಶಿವ ಶ್ಯಾನುಬೋಗ್, ವಸತಿ ವೈದ್ಯಾಧಿಕಾರಿ ಡಾ. ಸುಧಾಕರ್ ಟಿ., ಆಸ್ಪತ್ರೆಯ ಅಧಿಕಾರಿಗಳು, ಕರ್ತವ್ಯನಿರತ ವೈದ್ಯರು, ಶುಶ್ರೂಕರು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಭಾಗವಹಿಸಿದ್ದರು.



Join Whatsapp