ಮುಂದೊಂದು ದಿನ ಮತದಾರ ಬಿಜೆಪಿಗೆ ತಿರುಗೇಟು ಕೊಡಲಿದ್ದಾನೆ: ಶಶಿ ತರೂರ್ ಭವಿಷ್ಯ

Prasthutha|

ನವದೆಹಲಿ: ಭಾರತೀಯನಿಗೆ ಪ್ರತಿ ಬಾರಿಯೂ ಅಚ್ಚರಿಯ ಫಲಿತಾಂಶ ಕೊಡುವ ಸಾಮರ್ಥ್ಯವಿದ್ದು, ಮುಂದೊಂದು ದಿನ ಅದೇ ಮತದಾರ ಬಿಜೆಪಿಗೆ ತಿರುಗೇಟು ಕೊಡಲಿದ್ದಾನೆ ಎಂದು ಶಶಿ ತರೂರ್ ಭವಿಷ್ಯ ನುಡಿದಿದ್ದಾರೆ.

- Advertisement -

ಇತ್ತೀಚೆಗೆ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ, ಸಂಸದ ಶಶಿ ತರೂರ್ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.

ಜೈಪುರದಲ್ಲಿ ನಡೆದ ಸಾಹಿತ್ಯ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪಂಚರಾಜ್ಯ ಚುನಾವಣೆಗಳ ಪೈಕಿ ಉತ್ತರಾಖಂಡ ಮತ್ತು ಗೋವಾದಲ್ಲಿ ಕಾಂಗ್ರೆಸ್ ಉತ್ತಮ ಕಾರ್ಯದಕ್ಷತೆಯನ್ನು ಪ್ರದರ್ಶಿಸಬಹುದಾಗಿತ್ತು. ಆದರೆ ಮತದಾರರನ್ನು ತಲುಪುವಲ್ಲಿ ಪಕ್ಷ ಸ್ಪಲ್ಪ ವಿಫಲವಾಗಿದೆ ಎಂದು ತಿಳಿಸಿದ್ದಾರೆ.

- Advertisement -

ದೇಶದ ಅಧಿಕಾರ ಹಿಡಿಯಲು ಪ್ರಮುಖ ಪಾತ್ರ ವಹಿಸುವ ಉತ್ತರ ಪ್ರದೇಶದಲ್ಲಿ ಪಕ್ಷದ ಸಾರಥ್ಯ ವಹಿಸಿದ್ದ ಪ್ರಿಯಾಂಕಾ ಗಾಂಧಿ ಅವರ ಅಬ್ಬರದ ಪ್ರಚಾರದ ಹೊರತಾಗಿಯೂ ಪಕ್ಷಕ್ಕೆ ಕಳಪೆ ಫಲಿತಾಂಶ ಬಂದಿರುವುದು ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ ಎಂದು ಅವರು ವಿಷಾಧಿಸಿದ್ದಾರೆ.

Join Whatsapp