ಸುರತ್ಕಲ್ ಟೋಲ್ ಗೇಟ್ ತೆರವಿಗೆ ಆಗ್ರಹ: ಹೆಜಮಾಡಿಯಿಂದ ಸುರತ್ಕಲ್ ವರೆಗೆ ಪಾದಯಾತ್ರೆ

Prasthutha|

ಉಡುಪಿ: ಸುರತ್ಕಲ್ ಎನ್.ಐ.ಟಿ.ಕೆ ಬಳಿಯ ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಮಾರ್ಚ್ 15 ರಂದು ಹೆಜಮಾಡಿಯಿಂದ ಸುರತ್ಕಲ್ ವರೆಗೆ ಪಾದಯಾತ್ರೆ ನಡೆಯಲಿದೆ.

- Advertisement -

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಹಬಾಳ್ವೆ ಸಂಘಟನೆಯ ಅಧ್ಯಕ್ಷ ಅಮೃತ ಶೆಣೈ, ಟೋಲ್ ಸಂಗ್ರಹ ಕೇಂದ್ರಗಳ ನಡುವೆ ವಿಶೇಷ ಸಂದರ್ಭದ ಹೊರತು 60 ಕೀ.ಮೀ. ಅಂತರ ಇರಬೇಕಿದ್ದರೂ ಸದ್ಯ ಹೆಜಮಾಡಿ ಟೋಲ್ ಆರಂಭವಾದ ತಕ್ಷಣ ಸುರತ್ಕಲ್ ಎನ್.ಐ.ಟಿ.ಕೆ ಟೋಲ್ ತೆರವಿಗೆ ನೀಡಿದ್ದ ಭರವಸೆ ಹುಸಿಯಾಗಿದೆ ಎಂದು ತಿಳಿಸಿದ್ದಾರೆ.

ಸುರತ್ಕಲ್ ಎನ್.ಐ.ಟಿ.ಕೆ ಟೋಲ್ ನಲ್ಲಿ ಸಣ್ಣ ಬಸ್ ಗಳು ತಿಂಗಳಿಗೆ 9000 ರೂ., ದೊಡ್ಡ ಬಸ್ಸುಗಳು 15000 ರೂ. ಸುಂಕ ನೀಡುತ್ತಿದ್ದು, ಹೆಚ್ಚುವರಿ ಹೊರೆಯಾಗಿದೆ. ಸತತ ಆರು ವರ್ಷಗಳಿಂದ ಮೂರು ತಿಂಗಳಿಗೊಮ್ಮೆ ಟೆಂಡರ್ ವಹಿಸಲಾಗುತ್ತಿದೆ. ಈ ಮಧ್ಯೆ ಸುರತ್ಕಲ್ ಟೋಲ್ ಅನಧಿಕೃತವೇ ಅಥವಾ ಅಧಿಕೃತವೇ ಸಂಬಂಧಪಟ್ಟವರು ಸ್ಪಷ್ಟಪಡಿಸಿಲ್ಲ ಎಂದು ದೂರಿದ್ದಾರೆ.

- Advertisement -

ಮಾರ್ಚ್ 15 ರಂದು ಬೆಳಗ್ಗೆ 9 ಕ್ಕೆ ಹೆಜಮಾಡಿಯಿಂದ ಆರಂಭವಾಗುವ ಪಾದಯಾತ್ರೆ 10 ಕಿ.ಮೀ ದೂರದ ಸುರತ್ಕಲ್ ನಲ್ಲಿ ಸಮಾರೋಪ ಸಭೆ ನಡೆಯಲಿದೆ. ಈ ಸಭೆಗೆ ದ.ಕ, ಉಡುಪಿ ಜಿಲ್ಲೆಗಳ ಸಮಾನ ಮನಸ್ಕ ಸಂಘಟನೆಗಳು ಟೋಲ್ ಗೇಟ್ ವಿರೋಧಿ ಸಮಿತಿ ನೇತೃತ್ವದಲ್ಲಿ ಪಾದಯಾತ್ರೆಯನ್ನು ಆಯೋಜಿಸಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಸಕ್ತ ಸುದ್ದಿಗೋಷ್ಠಿಯಲ್ಲಿ ಕಿಶನ್ ಹೆಗ್ಡೆ ಕೊಳ್ಕೆಬೈಲು, ಗಂಗಾಧರ ಬಿರ್ತಿ, ಬಾಲಕೃಷ್ಣ ಶೆಟ್ಟಿ, ರಮೇಶ್ ಕೋಟ್ಯಾನ್, ಅಬ್ದುಲ್ ಅಝೀಝ್ ಉದ್ಯಾವರ, ರಾಘವೇಂದ್ರ, ಸತೀಶ್ ನಾಯ್ಕ್ ಉಪಸ್ಥಿತರಿದ್ದರು.



Join Whatsapp