ಐಪಿಎಸ್ ಅಧಿಕಾರಿ ಡಿ. ರೂಪಾರನ್ನು ‘ಮೀಸಲಾತಿಯ ಅಡ್ಡಪರಿಣಾಮ’ ಎಂದ ಕಂಗನಾ ರಣಾವತ್ ಗೆ ನೆಟ್ಟಿಗರಿಂದ ಕ್ಲಾಸ್

Prasthutha|

ಬೆಂಗಳೂರು : ದೀಪಾವಳಿ ವೇಳೆ ಪಟಾಕಿ ನಿಷೇಧಕ್ಕೆ ಸಂಬಂಧಿಸಿ ಐಪಿಎಸ್ ಅಧಿಕಾರಿ ಡಿ. ರೂಪಾ ಅವರ ಟ್ವೀಟ್ ಗೆ ವಿವಾದಾತ್ಮಕ ಟ್ವೀಟ್ ಮಾಡುವ ಮೂಲಕ ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತೊಮ್ಮೆ ಭಾರೀ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

- Advertisement -

ದೀಪಾವಳಿ ಸಂದರ್ಭ ಪಟಾಕಿ ನಿಷೇಧಿಸಿದ್ದ ಸರಕಾರದ ಕ್ರಮವನ್ನು ಸ್ವಾಗತಿಸಿದ್ದ ಡಿ. ರೂಪಾ, ಪಟಾಕಿ ಹಿಂದೂ ಧರ್ಮದ ಸಂಸ್ಕೃತಿಯಲ್ಲವೆಂದು ಟ್ವೀಟ್ ಮಾಡಿದ್ದರು. ಇದನ್ನು ಬಿಜೆಪಿ ಬೆಂಬಲಿಗ ಸಂಘಟನೆಗಳ ಕಾರ್ಯಕರ್ತರು ವಿರೋಧಿಸಿದ್ದು, ನಟಿ ಕಂಗನಾ ರಣಾವತ್ ಕೂಡ ವಿರೋಧಿಸಿದ್ದಾರೆ.

ಇತರ ಬಿಜೆಪಿ ಬೆಂಬಲಿಗ ಕಾರ್ಯಕರ್ತರಂತೆಯೇ ಇತ್ತೀಚೆಗೆ ಎಲ್ಲಾ ವಿವಾದಗಳಲ್ಲಿ ಮೂಗು ತೂರಿಸಿ ಪ್ರತಿಕ್ರಿಯಿಸುತ್ತಿರುವ ನಟಿ ಕಂಗನಾ, ಐಪಿಎಸ್ ಅಧಿಕಾರಿ ಡಿ. ರೂಪಾರ ಹೇಳಿಕೆಗೆ ಯಾವುದೇ ಸಂಬಂಧವಿಲ್ಲದ ಮೀಸಲಾತಿಯನ್ನು ಎಳೆದು ತಂದಿದ್ದಾರೆ. ಅಲ್ಲದೆ, ಮೀಸಲಾತಿ ಬಗ್ಗೆ ತನಗಿರುವ ಅಸಹನೆಯ ಭಾವನೆಯನ್ನು ಹೊರಹಾಕಿದ್ದಾರೆ.

- Advertisement -

ರೂಪಾ ವಿರುದ್ಧ ಸರಣಿ ಟ್ವೀಟ್ ಗಳನ್ನು ಮಾಡಿದ್ದ ಕಂಗನಾ “ನೀವೆಲ್ಲಾ ಮೀಸಲಾತಿಯ ಅಡ್ಡಪರಿಣಾಮಗಳು’’ ಎಂದು ಹೀಯಾಳಿಸಿದ್ದಾರೆ. “ಮೀಸಲಾತಿಯ ಅಡ್ಡ ಪರಿಣಾಮಗಳು, ಯೋಗ್ಯರಲ್ಲದವರಿಗೆ ಅಧಿಕಾರ ದೊರೆತರೆ ಅವರು ಸಮಾಜದಲ್ಲಿನ ಗಾಯಗಳನ್ನು ಶಮನಗೊಳಿಸಲು ಬದಲು ಹೆಚ್ಚಿಸುತ್ತಾರೆ. ಆಕೆಯ ವೈಯಕ್ತಿಕ ಜೀವನದ ಬಗ್ಗೆ ನನಗೆ ಹೆಚ್ಚೇನೂ ತಿಳಿದಿಲ್ಲ. ಆದರೆ, ಅವರು ತಮ್ಮ ಅಸಾಮರ್ಥ್ಯದಿಂದಾಗಿ ಹತಾಶೆಗೊಂಡಿರುವುದಂತೂ ನಾನು ಖಾತ್ರಿ ಪಡಿಸುತ್ತೇನೆ’’ ಎಂದು ಕಂಗನಾ ಟ್ವೀಟ್ ಮಾಡಿದ್ದಾರೆ.

ಕಂಗನಾರ ಈ ಟ್ವೀಟ್ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಮೀಸಲಾತಿಯ ಉದ್ದೇಶ ಹಾಗೂ ಅವಶ್ಯಕತೆಯೇ ಗೊತ್ತಿಲ್ಲದೆ ಕಂಗನಾ ಟ್ವೀಟ್ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.

ಬ್ರಾಹ್ಮಣ ಸಮುದಾಯದ ರೂಪಾ ಮೀಸಲಾತಿ ಮೂಲಕ ಬಂದವರಲ್ಲ. ಮೀಸಲಾತಿಯ ಬಗ್ಗೆ ಕಂಗನಾಗಿರುವ ಪೂರ್ವಾಗ್ರಹ ಪೀಡಿತ ಚಿಂತನೆಯೇ ಅವರನ್ನು ಈ ರೀತಿ ಪ್ರತಿಕ್ರಿಯಿಸಲು ಪ್ರೇರೇಪಿಸಿದೆ ಎಂದು ಕಂಗನಾರ ವಿರುದ್ಧ ಟ್ವೀಟ್ ಗಳು ಹರಿದಾಡಿವೆ.

ಇದಕ್ಕೂ ಮೊದಲು ರೂಪಾ ಅವರ ಜೊತೆ ಅನುಚಿತವಾಗಿ ನಡೆದುಕೊಂಡ ಎರಡು ನಕಲಿ ಖಾತೆಗಳನ್ನು ಟ್ವಿಟರ್ ರದ್ದುಗೊಳಿಸಿತ್ತು. ಈ ಎರಡು ಅಕೌಂಟ್ ಗಳನ್ನು ಮರಳಿ ಸ್ಥಾಪಿಸಬೇಕೆಂದು ಬಿಜೆಪಿ ಬೆಂಬಲಿಗರು ಟ್ವಿಟರ್ ಟ್ರೆಂಟ್ ಮಾಡಿದ್ದರು. ಇದನ್ನು ಬೆಂಬಲಿಸಿ ಕಂಗನಾ, ಎಲ್ಲೆ ಮೀರಿ ಪ್ರತಿಕ್ರಿಯಿಸಿ, ದೇಶಾದ್ಯಂತ ಬಹುಸಂಖ್ಯಾತ ಸಮುದಾಯಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ.  

https://twitter.com/KanganaTeam/status/1328922920991690752


Join Whatsapp