ತೊಕ್ಕೊಟ್ಟು: ಫ್ಲೈ ಓವರ್’ನಲ್ಲಿ ಬೈಕ್ ಸ್ಟಂಟ್; ಆರು ಮಂದಿಯ ವಿರುದ್ಧ ಪ್ರಕರಣ

Prasthutha|

ತೊಕ್ಕೊಟ್ಟು: ಮಂಗಳೂರು ನಗರ ಹೊರವಲಯದ ತೊಕ್ಕೊಟ್ಟು ಫ್ಲೈ ಓವರ್’ನಲ್ಲಿ ಬೈಕ್ ಸ್ಟಂಟ್, ವೀಲಿಂಗ್ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಆರು ಮಂದಿಯ ವಿರುದ್ಧ ದಕ್ಷಿಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

- Advertisement -

ಫ್ಲೈ ಓವರ್’ನಲ್ಲಿ ಬೈಕ್ ಸ್ಟಂಟ್ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಇಲ್ಯಾಸ್ ಝಿಯಾನ್ ಎಂಬಾತ ಮಾರ್ಚ್ 1 ರಿಂದ 6 ರವರೆಗೆ ನೋಂದಣಿ ಸಂಖ್ಯೆ ಇಲ್ಲದ ಬೈಕ್ ನಲ್ಲಿ ಇನ್ನಿಬ್ಬರನ್ನು ಕೂರಿಸಿಕೊಂಡು ಓವರ್ ಬ್ರಿಡ್ಜ್ ನಿಂದ ಉಳ್ಳಾಲ ಬೈಲ್ ವರೆಗೆ ಮತ್ತು ನಾಗುರಿಯಿಂದ ಸಂಚಾರಿ ದಕ್ಷಿಣ ಪೊಲೀಸ್ ಠಾಣೆ ವರೆಗೆ ವೀಲಿಂಗ್, ಸ್ಟಂಟ್ ಮಾಡುತ್ತಾ ಅಡ್ಡಾದಿಡ್ಡಿಯಾಗಿ ಇತರೆ ವಾಹನ ಮತ್ತು ಸಾರ್ವಜನಿಕರಿಗೆ ಅಪಾಯವನ್ನುಂಟು ಮಾಡುವ ರೀತಿಯಲ್ಲಿ ಬೈಕನ್ನು ಚಲಾಯಿಸಿದ್ದಾನೆ.

ಈ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದ ಸಫ್ವಾನ್ ಎಂಬಾತನ ನಡೆಗೆ ನೆಟ್ಟಿಗರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ವೈರಲ್ ವೀಡಿಯೋ ಆಧಾರದಲ್ಲಿ ಇಲ್ಯಾಸ್ ಮತ್ತು ಸಫ್ವಾನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

- Advertisement -

ಈ ಹಿಂದೆ ನಗರದ ಹೊರವಲಯದ ಅಡ್ಯಾರ್ ನಲ್ಲಿ ಬೈಕ್ ನಲ್ಲಿ ವೀಲಿಂಗ್ ಮತ್ತು ಸ್ಟಂಟ್ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಕಿಶನ್ ಶೆಟ್ಟಿ ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು.



Join Whatsapp