ಪಾಕಿಸ್ಥಾನಕ್ಕೆ ಆಕಸ್ಮಿಕವಾಗಿ ಉಡಾವಣೆಯಾದ ಕ್ಷಿಪಣಿ: ವಿಷಾದ ವ್ಯಕ್ತಪಡಿಸಿದ ಭಾರತ ರಕ್ಷಣಾ ಸಚಿವಾಲಯ

Prasthutha|

ನವದೆಹಲಿ: ಪಾಕಿಸ್ಥಾನಕ್ಕೆ ಆಕಸ್ಮಿಕವಾಗಿ ಕ್ಷಿಪಣಿ ಉಡಾವಣೆಯಾಗಿದ್ದು ತಾಂತ್ರಿಕ ದೋಷದಿಂದ ಈ ಪ್ರಮಾದ ಉಂಟಾಗಿದೆ ಎಂದು ಭಾರತೀಯ ರಕ್ಷಣಾ ಸಚಿವಾಲಯ ಹೇಳಿದೆ. ಅಲ್ಲದೆ ಘಟನೆಯ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದೆ. ವಾಡಿಕೆಯ ನಿರ್ವಹಣೆಯ ಸಂದರ್ಭದಲ್ಲಿ, ತಾಂತ್ರಿಕ ದೋಷವು ಆಕಸ್ಮಿಕವಾಗಿ ಕ್ಷಿಪಣಿಯನ್ನು ಹಾರಿಸಲು ಕಾರಣವಾಗಿದೆ ಎಂದು ಸಚಿವಾಲಯವು ತಿಳಿಸಿದೆ.

- Advertisement -

ಗುರುವಾರ ಪಾಕಿಸ್ಥಾನ ಸೇನೆಯು ಭಾರತದಿಂದ ಅತಿವೇಗದ ಕ್ಷಿಪಣಿ ಉಡಾವಣೆಗೊಂಡು ಪಾಕಿಸ್ಥಾನದ ವಾಯುಪ್ರದೇಶವನ್ನು ಪ್ರವೇಶಿಸಿದೆ ಎಂದು ಹೇಳಿತ್ತು. ಖನೇವಾಲ್ ಜಿಲ್ಲೆಯ ಮಿಯಾನ್ ಚನ್ನು ಬಳಿ ಕ್ಷಿಪಣಿಯು ಬಿದ್ದಿರುವ ಬಗ್ಗೆ ವರದಿಯಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ರಕ್ಷಣಾ ಸಚಿವಾಲಯ ಈ ಘಟನೆಯನ್ನು ಭಾರತ ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ ಮತ್ತು ಉನ್ನತ ಮಟ್ಟದ ನ್ಯಾಯಾಲಯದ ವಿಚಾರಣೆಗೆ ಆದೇಶಿಸಿದೆ ಎಂದು ಹೇಳಿದೆ.



Join Whatsapp