ಮದ್ರಸಾಗಳಲ್ಲಿ ಭಯೋತ್ಪಾದನೆ ಆಧಾರ ರಹಿತ ಆರೋಪ: ಶಶಿಕಲಾ ಜೊಲ್ಲೆ

Prasthutha|

ಬೆಂಗಳೂರು: ಮದ್ರಸಾಗಳಲ್ಲಿ ಧಾರ್ಮಿಕ ಭಯೋತ್ಪಾದನೆ ಮತ್ತು ಮೂಲಭೂತವಾದ ಚಟುವಟಿಕೆಗಳು ನಡೆಯುತ್ತಿವೆ ಎಂದು ಸಂಘ ಪರಿವಾರ ಅಪಪ್ರಚಾರ ಮಾಡುತ್ತಿರುವ ಬೆನ್ನಲ್ಲೇ ರಾಜ್ಯದ ಮದ್ರಸಾಗಳಲ್ಲಿ ಯಾವುದೇ ತರದಲ್ಲೂ ಮೂಲಭೂತವಾದ ಶಿಕ್ಷಣ ನೀಡಲಾಗುತ್ತಿಲ್ಲ ಎಂದು ರಾಜ್ಯ ಬಿಜೆಪಿ ಸರಕಾರವೇ ಇದೀಗ ಅಧಿಕೃತವಾಗಿ ಉತ್ತರ ನೀಡಿದೆ.

- Advertisement -

ಮದ್ರಸಾ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ದೇವರನ್ನು ಪೂಜಿಸುವವರಿಗೆ ಕೊಲ್ಲು ಎಂಬುದಾಗಿ ಪಾಠ ಮಾಡುತ್ತಿಲ್ಲ. ಇದು ಆಧಾರರಹಿತ ಆರೋಪವಾಗಿದೆ. ನಿಜವಾಗಿ ಮದ್ರಸಾಗಳಲ್ಲಿ ಸಮಸ್ತ ಜನಗಳ ಮಧ್ಯೆ ಸೌಹಾರ್ದ, ಸಹಬಾಳ್ವೆ, ಭ್ರಾತೃತ್ವ ಸಂಬಂಧಗಳನ್ನು ಬೆಳೆಸಲು ಪಾಠ ಮಾಡಲಾಗುತ್ತದೆ ಎಂದು ಮುಜುರಾಯಿ ಮತ್ತು ವಕ್ಫ್ ಸಚಿವರಾದ ಶಶಿಕಲಾ ಜೊಲ್ಲೆ ಅವರು ವಿಧಾನಪರಿಷತ್ ನಲ್ಲಿ ಉತ್ತರಿಸಿದ್ದಾರೆ.

ಮದ್ರಸಾಗಳ ಶಿಕ್ಷಣ ಕುರಿತು ಸಂಘ ಪರಿವಾರದ ಹಿನ್ನೆಲೆಯ ವಿಧಾನಪರಿಷತ್ ಸದಸ್ಯರಾದ ಮುನಿರಾಜುಗೌಡ ಮತ್ತು ಎನ್.ರವಿಕುಮಾರ್ ಈ ಹಿಂದಿನ ಹಲವು ಅಧಿವೇಶನಗಳಲ್ಲಿ ಪ್ರಶ್ನೆಗಳನ್ನು ಕೇಳುತ್ತಲೇ ಬಂದಿದ್ದರು. ಈ ಪ್ರಶ್ನೆಗಳಿಗೆ ಇದೇ ಬಿಜೆಪಿ ಸರಕಾರವು ಮದ್ರಸಾಗಳಲ್ಲಿ ಆಧುನಿಕ ಮತ್ತು ಉನ್ನತ ಮಟ್ಟದ ಶಿಕ್ಷಣ ಒದಗಿಸಲಾಗುತ್ತಿದೆ ಎಂದು ಉತ್ತರಿಸಿದೆ.

- Advertisement -

ವಿಧಾನಪರಿಷತ್ ನಲ್ಲಿ ಬುಧವಾರ ನಡೆದ ಅಧಿವೇಶನದಲ್ಲಿ ಎನ್.ರವಿಕುಮಾರ್ ಅವರು ಮದ್ರಸಾ ಶಿಕ್ಷಣ ಮತ್ತು ಆಪಾದನೆಗಳ ಬಗ್ಗೆ ಕೇಳಿದ್ದ 3 ಪ್ರಶ್ನೆಗಳಿಗೆ ಉತ್ತರಿಸಿದ ಸಚಿರಾದ ಶಶಿಕಲಾ ಜೊಲ್ಲೆ, ‘ ಹೊರ ದೇಶ ಮತ್ತು ಬೇರೆ ರಾಜ್ಯಗಳಿಂದ ನಮ್ಮ ರಾಜ್ಯದಲ್ಲಿ ಬಂದು ಮದ್ರಸಾ ಶಿಕ್ಷಣ ಪಡೆಯುವ ಬಗ್ಗೆ ಸಂವಿಧಾನಾತ್ಮಕವಾಗಿ ಯಾವುದೇ ನಿರ್ಬಂಧವಿರುವುದಿಲ್ಲ. ನಮ್ಮ ರಾಜ್ಯದ ಮದ್ರಸಾಗಳಲ್ಲ್ಲಿ ಅತೀ ಉನ್ನತ ಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಮೂಲಭೂತವಾದ ಶಿಕ್ಷಣ ನಮ್ಮ ರಾಜ್ಯದಲ್ಲಿ ಇಲ್ಲ’ ಎಂದು ಹೇಳಿದ್ದಾರೆ.



Join Whatsapp