ಇನ್ಮುಂದೆ ಬೌಲ್ ಮಾಡುವ ಮುನ್ನ ಬ್ಯಾಟ್ಸ್ ಮೆನ್ ಕ್ರೀಸ್ ಬಿಟ್ಟರೆ ಔಟ್ !

Prasthutha|

► ವಿವಾದಿತ ಮಂಕಡ್ ಗೆ ಎಂಸಿಸಿ ಸಮ್ಮತಿ

- Advertisement -

ಮುಂಬೈ : ಕ್ರಿಕೆಟ್ ಪಂದ್ಯಾಟದಲ್ಲಿ ಬೌಲಿಂಗ್ ಮಾಡುವ ಮುನ್ನವೇ ಬ್ಯಾಟ್ಸ್ ಮೆನ್ ಕ್ರೀಸ್ ಬಿಟ್ಟರೆ ಔಟ್ ಎನ್ನುವ ತೀರ್ಪು ಕ್ರೀಡಾಸ್ಪೂರ್ತಿಗೆ ವಿರುದ್ಧವಾದ ನಡೆಯಲ್ಲ ಎಂದು ಎಂಸಿಸಿ ಹೇಳಿದೆ. ಎಂಸಿಸಿ (ಮೆರಿಲ್ ಬೋನ್ ಕ್ರಿಕೆಟ್ ಸಂಸ್ಥೆ) ಹೊರಡಿಸಿರುವ ಹೊಸ ನಿಯಮದ ಪ್ರಕಾರ ವಿವಾದಿತ ಮಂಕಡ್‌ ಅನ್ನು ರನ್ ಔಟ್ ಎಂದು ಪರಿಗಣಿಸುವಂತೆ ಸೂಚಿಸಿದೆ.

ಈ ನಿಯಮದ ಪ್ರಕಾರ ಮಂಕಡ್‌ ಮಾಡಿ ಬೌಲರ್, ಬ್ಯಾಟ್ಸ್ ಮೆನ್ ಅನ್ನು ಔಟ್ ಮಾಡಿದರೆ ರನ್ ಔಟ್ ಎಂದು ಪರಿಗಣಿಸಲಾಗುತ್ತದೆ. ಅಲ್ಲದೆ ಸಲೈವಾ (ಎಂಜಲು) ಹಚ್ಚುವುದನ್ನು ನಿಷೇಧಿಸಲಾಗಿದೆ. ಕ್ರಿಕೆಟ್ ನಿಯಮಾವಳಿಗಳನ್ನು 2017ರಲ್ಲಿ ಮೊದಲ ಬಾರಿಗೆ ಪರಿಚಯಿಸಿದ ನಂತರ ಹಲವು ಬಾರಿ ತಿದ್ದುಪಡಿಗಳನ್ನು ಮಾಡಲಾಗಿತ್ತು. ಇದೀಗ ಎಂಸಿಸಿ ಮತ್ತೆ ತಿದ್ದುಪಡಿ ಮಾಡಿದೆ.

- Advertisement -

ಮೆರಿಲ್ ಬೋನ್ ಸಂಸ್ಥೆ ಕ್ರಿಕೆಟ್ನದಲ್ಲಿ ಹೊಸ ನಿಯಮಗಳನ್ನು ಪರಿಚರಿಸುತ್ತದೆ. ಅದಗ್ಯೂ ಈ ನಿಯಮಗಳನ್ನು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಹಾಗೂ ರಾಷ್ಟ್ರೀಯ ಕ್ರಿಕೆಟ್ ಮಂಡಳಿ ತಮಗೆ ಬೇಕಾದಲ್ಲಿ ಮಾತ್ರವಷ್ಟೆ ಚರ್ಚಿಸಿ ಅನುಷ್ಠಾನಗೊಳಿಸುತ್ತದೆ.



Join Whatsapp