ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯಿಂದ ಬ್ಯಾರಿ ತಾಲೀಮು ಜಲ್ಸ್ -2022 ಕಾರ್ಯಕ್ರಮ

Prasthutha|


ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಗುರುಪುರ ಎಮ್.ಜಿ.ಎಮ್ ತಾಲೀಮು ಸ್ಫೋಟ್ಸ್ ನ ಸಹಕಾರದಲ್ಲಿ ಮಾರ್ಚ್ 11ರ ಶುಕ್ರವಾರದಂದು ಸಂಜೆ 6 ಗಂಟೆಗೆ ‘ಬ್ಯಾರಿ ತಾಲೀಮು ಜಲ್ಸ್ -2022’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಕಾಡೆಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ತಿಳಿಸಿದ್ದಾರೆ.

- Advertisement -


ಕಾರ್ಯಕ್ರಮವನ್ನು ಗುರುಪುರ ಕೈಕಂಬ ಎಸ್.ವೈ.ಎಸ್ ಯುನಿಟ್ ನ ಅಧ್ಯಕ್ಷ ಎಮ್.ಹೆಚ್. ಮೊಹಿಯುದ್ದೀನ್ ಹಾಜಿ ಅಡ್ಡೂರ್ ಉದ್ಘಾಟಿಸಲಿದ್ದಾರೆ. ಗುರುಪುರ ಗ್ರಾಮ ಪಂಚಾಯತ್ ನ ಅಧ್ಯಕ್ಷ ಯಶವಂತ ಶೆಟ್ಟಿ, ಬಹುಭಾಷಾ ಕವಿ ಮುಹಮ್ಮದ್ ಬಡ್ಡೂರು, ಗಂಜಿಮಠ ಗ್ರಾಮ ಪಂಚಾಯತ್ ನ ಅಧ್ಯಕ್ಷ ನೋಣಯ್ಯ ಕೋಟ್ಯಾನ್ , ಗುರುಪುರ ಗ್ರಾಮ ಪಂಚಾಯತ್ ನ ಸದಸ್ಯ ರಾಜೇಶ್ ಕುಮಾರ್, ಗ್ರಾಮ ಪಂಚಾಯತ್ ಸದಸ್ಯ ಎ.ಕೆ ರಿಯಾಝ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ ಲಯನ್ ಡಾ.ಇ.ಕೆ.ಎ ಸಿದ್ದೀಕ್ ಅಡ್ಡೂರು, ಸಮಾಜ ಸೇವಕರು ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಯು.ಪಿ.ಇಬ್ರಾಹಿಂ ಬಜ್ಪೆ ಪೊಲೀಸ್ ಸರ್ಕಲ್ ಇನ್ಸ್ ಪೆಕ್ಟರ್ ಪಿ.ಜಿ.ಸಂದೇಶ್, ಅಖಿಲ ಭಾರತ ಬ್ಯಾರಿ ಪರಿಷತ್ ನ ಅಧ್ಯಕ್ಷ ಜಿ.ಎಮ್ .ಶಾಹುಲ್ ಹಮೀದ್ ಹಾಜಿ ಮೆಟ್ರೋ, ಸಮಾಜ ಸೇವಕ ಹಾಗೂ ಉದ್ಯಮಿ ಗುರುಪುರ ಅಬ್ದುಲ್ ಲತೀಫ್ , ಮದರಸ ಮ್ಯಾನೇಜ್ ಮೆಂಟ್ ಗುರುಪುರ ರೇಂಜ್ ನ ಅಧ್ಯಕ್ಷ ಹಾಗೂ ಸಮಾಜ ಸೇವಕ ನೌಶಾದ್ ಹಾಜಿ, ಆದರ್ಶ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ನ ನಿರ್ದೇಶಕ ಹಾಗೂ ಸಮಾಜ ಸೇವಕ ಆಸಿಫ್ ಸೂರಲ್ಪಾಡಿ , ಉಮ್ಮಗ್ ಒರು ಅಗ ಸಂಸ್ಥೆಯ ಅಧ್ಯಕ್ಷ ಮುಸ್ತಫ ಇಂಜಿನಿಯರ್ ದೆಮ್ಮಲೆ ಅಡ್ಡೂರು, ತಕ್ವಿಯತುಲ್ ಇಸ್ಲಾಂ ಮದರಸ ಇದರ ಅಧ್ಯಕ್ಷರಾದ ಅನ್ಸಾರ್ ಇಂಜಿನಿಯರ್ ಅದ್ಯಪಾಡಿ, ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ವಿಶೇಷ ಆಹ್ವಾನಿತರಾಗಿ ಚಲನಚಿತ್ರ ನಿರ್ದೇಶಕ ಇಸ್ಮಾಯಿಲ್ ಮೂಡು ಶೆಡ್ಡೆ, ಸಂತ ಅಲೋಶಿಯಸ್ ಕಾಲೇಜಿನ ಉಪನ್ಯಾಸಕಿ ಫ್ಲೋರಾ ಕ್ಯಾಸ್ಟಲಿನೋ , ಸಮಾಜ ಸೇವಕ, ಉದ್ಯಮಿ ಎಮ್. ಎಸ್ ಶೇಖ್ ಮೋನು ಅಡ್ಡೂರು, ಎದುರು ಪದವು ಜುಮ್ಮಾ ಮಸೀದಿಯ ಅಧ್ಯಕ್ಷ ಹನೀಫ್, ಉದ್ಯಮಿ ಎಮ್ ಜಿ ಅಬ್ದುಲ್ ಬಶೀರ್ ಗುರುಪುರ, ಫ್ರೆಂಡ್ಸ್ ಸರ್ಕಲ್ ಕೆ ಗುರುಪುರ ಕೈಕಂಬ ಇದರ ಅಧ್ಯಕ್ಷ ಅಬ್ದುಲ್ಲಾ ಮೇಫಾ, ಐಡಿಯಲ್ ಮರ್ಕಝ್ ಕೈಕಂಬ ಇಸ್ಮಾಯಿಲ್ ಬಶೀರ್, ಸಮಾಜ ಸೇವಕರು ಉದ್ಯಮಿ ಎ.ಕೆ. ಹಾರೀಸ್ ಅಡ್ಡೂರು, ಸಮಾಜ ಸೇವಕ ಅಡ್ಡೂರು ಡಿ.ಎಸ್.ರಫೀಕ್, ಕೈಕಂಬ ಮೋದಿ ಪರಿವಾರ್ ರಿಕ್ಷಾ ಚಾಲಕರು ಸಂಘದ ಅಧ್ಯಕ್ಷ ಸತೀಶ್ ಜೋಗಿ ಮಟ್ಟಿ, ಅಬ್ದುಲ್ ಕಾದರ್ ಎನ್ ಕೆ ನಡುಗುಡ್ಡೆ, ಬಾಮಿ ಆಂಗ್ಲಮಾಧ್ಯಮ ಶಾಲೆ ತೆಂಕುಳಿಪಾಡಿಯ ಗುರುಪುರದ ನಿಕಟಪೂರ್ವ ಪ್ರಾಂಶುಪಾಲ ಹೆಚ್ ನಾಸಿರ್ ಮಾಸ್ಟರ್ ಹಿರೇಬಂಡಾಡಿ, ರಾಷ್ಟ್ರೀಯ ವಿದ್ಯಾ ವಿಭೂಷಣ ಪ್ರಶಸ್ತಿ ಪುರಸ್ಕ್ರತ ಇಕ್ಬಾಲ್ ಬಾಳಿಲ, ಎಸ್.ವೈ.ಎಸ್ ಯುನಿಟ್ ಗುರುಪುರ ಕೈಕಂಬ ಇದರ ನಿರ್ದೇಶಕ ಹಂಝ ಕೈಕಂಬ, ಎಮ್ .ಜೆ. ಎಮ್ . ತಾಲೀಮು ಸ್ಪೋಟ್ಸ್ ಗುರುಪುರದ ಕಾರ್ಯದರ್ಶಿ ಎಂ.ಜಿ ಅಬ್ದುಲ್ ಸಲಾಂ ಗುರುಪುರ, ಅನ್ಸಾರ್, ಇನ್ ಬಾಕ್ಸ್ ಮೂಡಬಿದಿರೆ, ಬದ್ರುದ್ದೀನ್ ಇನ್ ಬಾಕ್ಸ್ ಮೂಡಬಿದಿರೆ ಇವರುಗಳು ಭಾಗವಹಿಸಲಿದ್ದಾರೆ.

- Advertisement -


ಬಳಿಕ ಬ್ಯಾರಿ ಅಕಾಡೆಮಿ ವತಿಯಿಂದ ವಿಖಾಯ ಕೈಕಂಬ ಎಸ್ ಕೆ ಎಸ್ ಎಸ್ ಎಫ್ ಗುರುಪುರ ಕೈಕಂಬ (ಸಮಾಜ ಸೇವೆ), ಸಹಾಯ್ ಎಸ್ ಎಸ್ ಏಫ್ ಗುರುಪುರ ಕೈಕಂಬ (ಸಮಾಜ ಸೇವೆ), ಮಹಮ್ಮದ್ ಕುಂಞ (ಗುರುಕುಲ ಪ್ರಶಸ್ತಿ ವಿಜೇತರು), ಮುಝಮ್ಮಿಲ್ ನೂಯಿ (ಸಮಾಜಸೇವೆ), ಎ.ಕೆ.ಇಮ್ರಾನ್ ಅಡ್ಡೂರು (ಸಮಾಜ ಸೇವೆ), ಅಬ್ದುಲ್ ಜಲೀಲ್ ಅಡ್ಡೂರು (ಸಮಾಜ ಸೇವೆ), ಕಲಂದರ್ ಬಜ್ಪೆ (ಸಾಹಿತಿ ಕವಿ ಚಿಂತಕರು), ತಾಜುದ್ದೀನ್ ಅಮ್ಮುಂಜೆ (ಸಾಹಿತಿ ಗಾಯಕರು), ಝಕರಿಯಾ ಅಡ್ಡೂರು (ಸೌಹಾರ್ದತೆ), ಅರ್ಫರಾಝ್ ಉಳ್ಳಾಲ (ಗಾಯಕರು), ಇಸ್ಮಾಯಿಲ್ ಮೂಡುಶೆಡ್ಡೆ (ಚಲನಚಿತ್ರ ನಿರ್ದೇಶಕರು), ಫ್ರೆಂಡ್ಸ್ ಸರ್ಕಲ್ ಕೈಕಂಬ (ಸಮಾಜ ಸೇವೆ), ಎಮ್ ಎಚ್ ಮುಹಿಯ್ಯದ್ದೀನ್ ಅಡ್ಡೂರು (ಸಮಾಜ ಸೇವೆ), ಅಝೀಝ್ ಕಂದಾವರ (ಸಮಾಜ ಸೇವೆ ), ಮಯ್ಯದ್ದಿ ಉಳಾಯಿಬೆಟ್ಟು (ಧಾರ್ಮಿಕ ) ಇವರುಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಹೀಂ ಉಚ್ಚಿಲ್ ತಿಳಿಸಿದ್ದಾರೆ.


ರಾತ್ರಿ ಗಂಟೆ 8.00 ರಿಂದ ಎಮ್.ಜಿ.ಎಮ್ ತಾಲೀಮು ಸ್ಫೋರ್ಟ್ಸ್ ಕ್ಲಬ್ ಗುರುಪುರ ಇವರಿಂದ ತಾಲೀಮು ಪ್ರದರ್ಶನ ಹಾಗೂ ಕಲರ್ಸ್ ಕನ್ನಡದ ಹಾಡು ಕರ್ನಾಟಕ ಖ್ಯಾತಿಯ ಅರ್ಫಝ್ ಉಳ್ಳಾಲ್ ಮತ್ತು ಹಸನಬ್ಬ ಮೂಡಬಿದಿರೆ ಇವರಿಂದ ಬ್ಯಾರಿ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಸದಸ್ಯ ಸಂಚಾಲಕರಾಗಿ ಬ್ಯಾರಿ ಅಕಾಡೆಮಿಯ ಸದಸ್ಯ ಶಂಶೀರ್ ಬುಡೋಳಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Join Whatsapp