ಫ್ರೀಡಂಪಾರ್ಕ್ ನಲ್ಲಿ ಭದ್ರತೆಗಿದ್ದ ಪೊಲೀಸರ ಮೇಲೆ ಹೆಜ್ಜೇನು ದಾಳಿ: ಹಲವರು ಆಸ್ಪತ್ರೆಗೆ ದಾಖಲು

Prasthutha|

ಬೆಂಗಳೂರು: ಪ್ರತಿಭಟನೆ ಸಭೆ, ಸಮಾವೇಶಗಳು ನಡೆಯುವ ಫ್ರೀಡಂಪಾರ್ಕ್ನಲ್ಲಿ ಇಂದು ಬೆಳಿಗ್ಗೆ ಹೆಜ್ಜೇನು ದಾಳಿ ನಡೆಸಿದ್ದು ಭದ್ರತೆಗೆ ನಿಯೋಜನೆಗೊಂಡಿದ್ದ 10 ಹೆಚ್ಚು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.

- Advertisement -

ದಿಢೀರ್ ಹೆಜ್ಜೇನು ದಾಳಿ ಓರ್ವ ಇನ್ಸ್ ಪೆಕ್ಟರ್ ಸೇರಿದಂತೆ 10 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಗಾಯಗೊಂಡ ಇಬ್ಬರು ಸಿಬ್ಬಂದಿಯ ಸ್ಥಿತಿ ಗಂಭೀರವಾಗಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

- Advertisement -

ಇದ್ದಕ್ಕಿದ್ದಂತೆ ಗುಂಪು ಗುಂಪಾಗಿ ಬಂದ ಹೆಜ್ಜೇನುಗಳಿಂದ ತಪ್ಪಿಸಲು ಪೊಲೀಸ್ ಸಿಬ್ಬಂದಿ ಸೇರಿ ಹಲವರು ಪ್ರಯಾಸ ಪಡಬೇಕಾಯಿತು. ಓಡುತ್ತಿದ್ದ ಪೊಲೀಸರನ್ನು ಹೆಜ್ಜೇನು ಬೆನ್ನಟ್ಟಿ ದಾಳಿ ನಡೆಸಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.



Join Whatsapp