ಲೋನ್ ಆ್ಯಪ್ ಸುಳಿಗೆ ಸಿಲುಕಿ ಸಂಕಷ್ಟಪಡುತ್ತಿದ್ದೀರಾ..!?; ಅದರಿಂದ ಪಾರಾಗಲು ಇಲ್ಲಿದೆ ಸಿಂಪಲ್ ಐಡಿಯಾ!

Prasthutha|

ಮಂಗಳೂರು: ಲೋನ್ ಆ್ಯಪ್ ಗಳಿಂದ ಸಾಲ ಪಡೆದವರು ಅದರಿಂದಾಗಿ ಸಂಕಷ್ಟಕ್ಕೊಳಗಾಗಿದ್ದರೆ ಅಂತಹವರು ತಕ್ಷಣವೇ ತಮ್ಮ ಸಿಮ್ ಕಾರ್ಡ್ ಬದಲಿಸಿಕೊಳ್ಳಲಿ ಅನ್ನೋ ಸಿಂಪಲ್ ಐಡಿಯಾವೊಂದನ್ನು ಮಂಗಳೂರು ನಗರ ಡಿಸಿಪಿ ಹರಿರಾಂ ಶಂಕರ್ ನೀಡಿದ್ದಾರೆ.

- Advertisement -

ಈಗಾಗಲೇ ಕಮೀಷನರೇಟ್ ವ್ಯಾಪ್ತಿಯಲ್ಲಿ ಇಬ್ಬರು ವ್ಯಕ್ತಿಗಳು ಲೋನ್ ಆ್ಯಪ್ ನಿಂದಾಗಿ ಆಗುತ್ತಿರುವ ಕಿರುಕುಳದ ಬಗ್ಗೆ ದೂರಿತ್ತಿದ್ದಾರೆ. ಆದರೆ, ಇಂತಹ ಆ್ಯಪ್ ಗಳು ಅನಧಿಕೃತ ಅ್ಯಪ್ ಗಳಾಗಿರುತ್ತದೆ ಅನ್ನೋದನ್ನು ಸಾರ್ವಜನಿಕರು ತಿಳಿದುಕೊಳ್ಳಬೇಕಿದೆ.

ಸಾಲಗಾರರು ತಮ್ಮ ಸಾಲವನ್ನು ಮರುಪಾವತಿಸದಿದ್ದರೆ ಇಂತಹ ಆ್ಯಪ್ ಗಳಿಗೆ ಯಾವುದೇ ಲೀಗಲ್ ನೋಟೀಸ್ ನೀಡಲು, FIR ದಾಖಲಿಸಲು ಸಾಧ್ಯವಿರುವುದಿಲ್ಲ. ನಿಮ್ಮನ್ನು ಬೆದರಿಸುವ ಕೆಲಸ ನಡೆಯುತ್ತಿದ್ದರೆ ಮೊಬೈಲ್ ನಂಬರ್ ಚೇಂಜ್ ಮಾಡಿಕೊಳ್ಳಿ, ಆದರೆ ಹೊಸ ನಂಬರ್ ಅನ್ನು ಮಾತ್ರ ಆಪ್ತರಿಗಷ್ಟೇ ನೀಡಿ ಅಂತಾ ಹರಿರಾಂ ಶಂಕರ್ ಸಲಹೆ ನೀಡಿದ್ದಾರೆ.‌

- Advertisement -

ಒಂದು ವೇಳೆ ಸಾಲಗಾರರ ತಿರುಚಿದ ಅಶ್ಲೀಲ ಚಿತ್ರ ಗಳನ್ನು ವೈರಲ್ ಮಾಡುತ್ತಿದ್ದರೆ ತಕ್ಷಣವೇ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಿ, ಅದರ ಹೊರತಾಗಿ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಯಂತಹ ಚಿಂತೆ ಬೇಡ ಎಂದು ಡಿಸಿಪಿ ಹರಿರಾಂ ಶಂಕರ್ ಮನವಿ ಮಾಡಿಕೊಂಡಿದ್ದಾರೆ.



Join Whatsapp