ರಷ್ಯಾ – ಉಕ್ರೇನ್ ಕದನ: ಸಂತ್ರಸ್ತ ಭಾರತೀಯ ವಿದ್ಯಾರ್ಥಿಗಳಿಗೆ ನೆರವಾದ ಪಾಕಿಸ್ತಾನಿ ಪ್ರಜೆ

Prasthutha|

ಕೀವ್: ಯುದ್ಧಪೀಡಿತ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಸಾರಿಗೆ ಸಮಸ್ಯೆ ಎದುರಾದಾಗ ಪಾಕಿಸ್ತಾನ ಪ್ರಜೆ ಮೊಹಝ್ಝಮ್ ಖಾನ್, ಯಾವುದೇ ಹಣ ಪಡೆಯದೆ ಸಾರಿಗೆ ವ್ಯವಸ್ಥೆಗೊಳಿಸಿ ಭಾರತೀಯರಿಗೆ ನೆರವಾಗಿದ್ದಾರೆ.

- Advertisement -

ಭಾರತೀಯ ವಿದ್ಯಾರ್ಥಿಗಳ ಸ್ಥಳಾಂತರ ಹೊಣೆಹೊತ್ತ SOS ಇಂಡಿಯಾದ ಸಂಸ್ಥಾಪಕ ನಿತೇಶ್ ಸಿಂಗ್ ಎಂಬವರಿಗೆ ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಸಾರಿಗೆ ಸಮಸ್ಯೆ ಎದುರಾಗಿತ್ತು.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನಿತೇಶ್ ಸಿಂಗ್, ಭಾರತೀಯ ವಿದ್ಯಾರ್ಥಿಗಳು ಹಂಗೇರಿ, ಪೋಲೆಂಡ್, ಸ್ಲೋವಾಕಿಯಾ ಅಥವಾ ರೊಮೇನಿಯಾ ಗಡಿ ತಲುಪುವ ನಿಟ್ಟಿನಲ್ಲಿ ಸಾಕಷ್ಟು ಸಾರಿಗೆ ವ್ಯವಸ್ಥೆ ಬೇಕಾಗಿತ್ತು. ಈ ಸಂದರ್ಭದಲ್ಲಿ ನೆರವಿಗೆ ಬಂದ ಪಾಕಿಸ್ತಾನಿ ಪ್ರಜೆ ಮುಹಝ್ಝಮ್ ಖಾನ್, ಯಾವುದೇ ಹಣ ತೆಗೆಯದೆ ಈ ವ್ಯವಸ್ಥೆಯನ್ನು ಮಾಡಿ ಭಾರತೀಯರಿಗೆ ನೆರವಾಗಿದ್ದಾರೆ ಎಂದು ತಿಳಿಸಿದ್ದಾರೆ.

- Advertisement -

ಈ ಮಧ್ಯೆ ಉಕ್ರೇನ್ ವಿವಿಧ ಸ್ಥಳಗಳಲ್ಲಿ ಸಿಲುಕಿರುವ ಸುಮಾರು 2500 ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ನೆರವಾಗಿರುವುದಾಗಿ ಮುಹಝ್ಝಮ್ ಖಾನ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಉಕ್ರೇನ್ ಬಸ್ ಟೂರ್ ಅಪರೇಟರ್ ಆಗಿರುವ ಪಾಕಿಸ್ತಾನ ಮೂಲದ ಮುಹಝ್ಝಮ್ ಖಾನ್ 11 ವರ್ಷಗಳ ಹಿಂದೆ ಉಕ್ರೇನ್’ಗೆ ಬಂದಿದ್ದರು.

ಈ ಸಂದಿಗ್ನ ಪರಿಸ್ಥಿತಿಯ ಲಾಭ ಪಡೆಯಲು ಯತ್ನಿಸಿದ ಕೆಲವು ಟ್ಯಾಕ್ಸಿ ಮತ್ತು ಬಸ್ ಚಾಲಕರು ಪ್ರತಿ ಸಂತ್ರಸ್ತರಿಂದ 250$ ಪಡೆಯುತ್ತಿದ್ದರು. ಈ ಸಂದರ್ಭದಲ್ಲಿ ಯಾವುದೇ ಹಣವನ್ನು ಪಡೆದಿರಲಿಲ್ಲ ಎಂದು ಮುಹಝ್ಝಮ್ ಖಾನ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಮುಹಝ್ಝಮ್ ಖಾನ್ ಮಾನವೀಯ ಸೇವೆಗೆ ಭಾರತೀಯ ಸಂತ್ರಸ್ತರ ಪೋಷಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.



Join Whatsapp