ಕೆಸಿಸಿ ವತಿಯಿಂದ ಸೌದಿಗೆ ತೆರಳಿದ ರಾಜ್ಯದ ಮೊದಲ ಉಮ್ರಾ ಯಾತ್ರಾರ್ಥಿಗಳು

Prasthutha|

ಮಂಗಳೂರು: ಕೆಸಿಸಿ ವತಿಯಿಂದ ಮಾಸಿಕ 1000 ರೂ. ಪಾವತಿಸಿ ಕೈಗೊಳ್ಳುವ ಉಮ್ರಾ ಯಾತ್ರೆಗೆ ಚಾಲನೆ ನೀಡಿದ್ದು, ಕೋವಿಡ್-ಲಾಕ್ ಡೌನ್ ಬಳಿಕದ ರಾಜ್ಯದ ಮೊದಲ ಬ್ಯಾಚ್ ಮಾ.8ರಂದು ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಸೌದಿಗೆ ತೆರಳಿದೆ.

- Advertisement -

ಕಳೆದ ಮೂರು ವರ್ಷಗಳಿಂದ ಈ ಯೋಜನೆ ಚಾಲ್ತಿಯಲ್ಲಿದ್ದು, ಇದೇ ರಂಝಾನ್ 30 ರಂದು ಯೋಜನೆಯು ಕೊನೆಗೊಳ್ಳಲಿದೆ ಎಂದು ಕೆಸಿಸಿ ಪ್ರಕಟನೆ ತಿಳಿಸಿದೆ.

ಈಗಾಗಲೇ ಕೆಸಿಸಿ ವತಿಯಿಂದ ನೂರಾರು ಮಂದಿ ಹಲವು ಬ್ಯಾಚ್ ಗಳಾಗಿ ಈ ಯೋಜನೆಯ ಮೂಲಕ ಉಮ್ರಾ ನಿರ್ವಹಿಸಿದ್ದಾರೆ. ಅಲ್ಲದೆ ತಮ್ಮ ಮಾಸಿಕ ಕಂತುಗಳನ್ನು ಯಥಾವತ್ತಾಗಿ ಪಾವತಿಸುತ್ತಿದ್ದಾರೆ. ಈ ಯೋಜನೆಯಿಂದ ಆರ್ಥಿಕವಾಗಿ ಹಿಂದುಳಿದ ಮುಸ್ಲಿಮರಿಗೆ ಉಮ್ರಾ ನಿರ್ವಹಿಸಲು ವರದಾನವಾಗಲಿದೆ. ಉಮ್ರಾ ಯಾತ್ರಾರ್ಥಿಗಳಿಗೆ ಊರಿನ ಮಾದರಿಯಲ್ಲಿ ಊಟೋಪಚಾರ, ಹರಂ ಹತ್ತಿರ ವಾಸ್ತವ್ಯದ ವ್ಯವಸ್ಥೆ, ಐಸಿಹಾಸಿಕ ಸ್ಥಳಗಳ ಭೇಟಿ ಮತ್ತು ಮಾಹಿತಿ, ಅನುಭವಿ ಅಮೀರ್ ಗಳಿಂದ ತರಬೇತಿ ಇವೆಲ್ಲವೂ ಕೆಸಿಸಿಯ ವೈಶಿಷ್ಟ್ಯಗಳಾಗಿವೆ. ಮಾಸಿಕ 1000 ಪಾವತಿಸಿ ಉಮ್ರಾ ಯಾತ್ರೆ ಕೈಗೊಳ್ಳುವ ಯೋಜನೆಯು ಇದೇ ರಂಝಾನ್ 30ರವರೆಗೆ ಚಾಲ್ತಿಯಲ್ಲಿರಲಿದೆ ಕೆಸಿಸಿ ಪ್ರಕಟನೆ ತಿಳಿಸಿದೆ.



Join Whatsapp