ಸಿವಿಲ್ ಇಂಜಿನಿಯರಿಂಗ್ ನಲ್ಲಿ 16 ಚಿನ್ನದ ಪದಕ ಪಡೆದ ಬುಶ್ರಾ ಮತೀನ್ : ವಿಶ್ವವಿದ್ಯಾಲಯದ ಇತಿಹಾಸದಲ್ಲೇ ಇದು ಮೊದಲ ದಾಖಲೆ

Prasthutha|

ರಾಯಚೂರು: ಇಲ್ಲಿನ ಖಾಸಗಿ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಬುಶ್ರಾ ಮತೀನ್ 16 ಚಿನ್ನದ ಪದಕ ಪಡೆಯುವ ಮೂಲಕ ಅಮೋಘ ಸಾಧನೆ ಮಾಡಿದ್ದಾರೆ.

- Advertisement -

ರಾಯಚೂರಿನ ಎಸ್‌ ಎಲ್‌ ಎನ್ ಕಾಲೇಜು ಬಿಇ ಸಿವಿಲ್ ಎಂಜಿನಿಯರಿಂಗ್  ವ್ಯಾಸಂಗ ಮಾಡುತ್ತಿರುವ ಬುಶ್ರಾ ಮತೀನ್ ಜಹೀರುದ್ದೀನ್ ಎನ್ನುವವರ ಪುತ್ರಿಯಾಗಿದ್ದಾರೆ.

 ಇವರು ಸಿವಿಲ್ ಇಂಜಿನಿಯರಿಂಗ್ ನ ಎಲ್ಲಾ 8 ಸೆಮಿಸ್ಟರ್ ಗಳಲ್ಲಿ ರಾಜ್ಯಕ್ಕೆ ಮೊದಲ ರಾಂಕ್ ಪಡೆದಿದ್ದಾರೆ. ಸಿವಿಲ್ ಇಂಜಿನಿಯರಿಂಗ್ ವಿವಿಧ ವಿಷಯಗಳಲ್ಲಿ ಒಟ್ಟು 16 ಚಿನ್ನದ ಪದಕಗಳನ್ನು ತನ್ನದಾಗಿಸಿಕೊಂಡಿದ್ದಾರೆ.

- Advertisement -

 ಬುಶ್ರಾ ಮತೀನ್ ಅವರು ತನ್ನ ಸಾಧನೆಗೆ ಕಾಲೇಜಿನ ಉಪನ್ಯಾಸಕರು, ಆಡಳಿತ ಮಂಡಳಿ, ಪೋಷಕರು ಹಾಗೂ ಸ್ನೇಹಿತರಿಗೆ ಧನ್ಯವಾದ ಹೇಳಿದ್ದು, ಮುಂದೆ ತಾನು ಯುಪಿಎಸ್ಸಿ ಎಕ್ಸಾಂ ಪಾಸ್ ಮಾಡುವ ಗುರಿ ಹೊಂದಿದ್ದೇನೆ ಎಂದು ಹೇಳಿದರು.



Join Whatsapp