ರಷ್ಯಾ-ಉಕ್ರೇನ್ ಯುದ್ಧ; ಆಶ್ರಯತಾಣವನ್ನು ಅರಸುತ್ತಾ1,000 ಕಿ.ಮೀ ಪ್ರಯಾಣಿಸಿದ ಹನ್ನೊಂದು ವರ್ಷದ ಬಾಲಕ

Prasthutha|

ಕೀವ್: ಉಕ್ರೇನ್ ಯುದ್ಧಭೂಮಿಯಿಂದ ಸುಮಾರು1.5 ಮಿಲಿಯನ್ ಜನರು ನೆರೆಯ ದೇಶಗಳಿಗೆ ಪಲಾಯನ ಮಾಡಿದ್ದಾರೆ. ಅವರಲ್ಲಿ ಹನ್ನೊಂದು ವರ್ಷದ ಉಕ್ರೇನಿಯನ್ ಹುಡುಗ ಸುರಕ್ಷಿತ ತಾಣವನ್ನು ಹುಡುಕುತ್ತಾ 1,000 ಕಿ.ಮೀ ಪ್ರಯಾಣಿಸಿದ್ದಾನೆ.

- Advertisement -

ಆಗ್ನೇಯ ಉಕ್ರೇನ್ ನ ಸಪೋರಿಜಿಯಾ ಮೂಲದ ಈ ಬಾಲಕಒಬ್ಬಂಟಿಯಾಗಿ ಸ್ಲೊವಾಕಿಯಾಕ್ಕೆ ಪ್ರಯಾಣಿಸಿದ್ದಾನೆ. ಅನಾರೋಗ್ಯದಿಂದ ಬಳಲುತ್ತಿರುವ ಸಂಬಂಧಿಯನ್ನು ನೋಡಿಕೊಳ್ಳಲು ಆತನ ಪೋಷಕರು ಉಕ್ರೇನ್ ನಲ್ಲಿ ಉಳಿದುಕೊಂಡಿದ್ದರಿಂದ ಹುಡುಗ ಏಕಾಂಗಿಯಾಗಿ ಪ್ರಯಾಣಿಸಿದ್ದಾನೆ. ಕೇವಲ ಬ್ಯಾಕ್ ಪ್ಯಾಕ್ ಬ್ಯಾಗ್, ತಾಯಿ ಬರೆದು ಕೊಟ್ಟ ಟಿಪ್ಪಣಿ ಮತ್ತು ಫೋನ್ ಸಂಖ್ಯೆಯನ್ನು ಮಾತ್ರ ಬಾಲಕನ ಕೈಯಲ್ಲಿತ್ತು.

ಸಂಬಂಧಿಕರ ಬಳಿಗೆ ತನ್ನ ಮಗನನ್ನು ರೈಲಿನಲ್ಲಿ ಸ್ಲೊವಾಕಿಯಾಕ್ಕೆ ಕಳುಹಿಸಿದ್ದೇನೆ. ಮಗನ ಕೈಯಲ್ಲಿ ಪಾಸ್ ಪೋರ್ಟ್ ಮತ್ತು ಪ್ಲಾಸ್ಟಿಕ್ ಚೀಲದಲ್ಲಿ ಒಂದು ಟಿಪ್ಪಣಿಯನ್ನು ನೀಡಿದ್ದೇನೆ ಎಂದು ಹುಡುಗನ ತಾಯಿ ಹೇಳಿದ್ದಾರೆ.

- Advertisement -

ಹುಡುಗ ಸ್ಲೊವಾಕಿಯಾಕ್ಕೆ ಬಂದಾಗ, ಗಡಿ ಅಧಿಕಾರಿಗಳು ರಾಜಧಾನಿ ಬ್ರಾಟಿಸ್ಲಾವಾದಲ್ಲಿರುವ ಸಂಬಂಧಿಕರನ್ನು ಸಂಪರ್ಕಿಸಿ ಹುಡುಗನನ್ನು ಅವರಿಗೆ ಹಸ್ತಾಂತರಿಸಿದರು. ಹುಡುಗನ ತಾಯಿ ತನ್ನ ಮಗನನ್ನು ಉತ್ತಮ ರೀತಿಯಲ್ಲಿ ನೋಡಿಕೊಂಡದ್ದಕ್ಕಾಗಿ ಸ್ಲೋವಾಕ್ ಆಡಳಿತ ಮತ್ತು ಪೊಲೀಸರಿಗೆ ಧನ್ಯವಾದ ಅರ್ಪಿಸುವ ಸಂದೇಶವನ್ನು ಕಳುಹಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.



Join Whatsapp