ಕೊನೆಯ ಹಂತದ ಮತದಾನ; ಮಾಧ್ಯಮಗಳ ಗಮನ ಸೆಳೆದ ವೃದ್ಧ ದಂಪತಿ

Prasthutha|

ಲಕ್ನೋ: ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ಕೊನೆಯ (ಏಳನೇ) ಹಂತದ ಮತದಾನ ಸಂಪೂರ್ಣ ಬಿಗಿ ಭದ್ರತೆಯೊಂದಿಗೆ ನಡೆಯುತ್ತಿದ್ದು, ಅಜಂಗಢ್ ನ ಮತಗಟ್ಟೆಗೆ ಆಗಮಿಸಿರುವ ವಯೋ ವೃದ್ಧರೊಬ್ಬರು ಮಾಧ್ಯಮಗಳ ಗಮನ ಸೆಳೆದಿದ್ದಾರೆ.

- Advertisement -

ಕೈ ಮುರಿತಕ್ಕೊಳಗಾದ ಅಂಗವಿಕಲ ಪತ್ನಿಯನ್ನು ತಳ್ಳು ಗಾಡಿಯಲ್ಲಿ ಕರೆತಂದು,ಮತ ಚಲಾಯಿಸಿದ ಅವರನ್ನು ಮಾತನಾಡಿಸಿದ ಮಾಧ್ಯಮದವರೊಂದಿಗೆ “ನನಗೆ ಬೆನ್ನುನೋವಿನ ಸಮಸ್ಯೆ ಇದ್ದು, ನನ್ನ ಪತ್ನಿಯ ಆರೋಗ್ಯವೂ ಸರಿಯಿಲ್ಲದ ಕಾರಣದಿಂದ ಈ ಗಾಡಿಯನ್ನು ಬಳಸುತ್ತಿದ್ದೇನೆ. ನಮಗೆ ಆಸರೆಯಾಗಿ ಯಾರೂ ಇಲ್ಲ. ರಾಜ್ಯ ಸರ್ಕಾರದ ವತಿಯಿಂದ 500/1000 ನೀಡಲಾಗಿದೆ, ಅದು ನಮ್ಮಅನಾರೋಗ್ಯವನ್ನು ಗುಣಪಡಿಸಬಹುದೇ? ಎಂದು ಪ್ರಶ್ನಿಸಿದ್ದಾರೆ.

ಪ್ರಧಾನಿ ಮೋದಿಯವರ ಸಂಸದೀಯ ಕ್ಷೇತ್ರ ವಾರಣಾಸಿ ಸೇರಿದಂತೆ 54 ಸ್ಥಾನಗಳನ್ನು ಒಳಗೊಂಡಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಸೋಮವಾರ ಬೆಳಿಗ್ಗೆ 7 ಗಂಟೆಗೆ ಆರಂಭವಾಗಿದೆ. ಅಜಂಗಢ್, ಮೌ, ಜೌನ್‌ಪುರ್, ಗಾಜಿಪುರ, ಚಂದೌಲಿ, ವಾರಣಾಸಿ, ಮಿರ್ಜಾಪುರ, ಭದೋಹಿ ಮತ್ತು ಸೋನ್‌ಭದ್ರ ಜಿಲ್ಲೆಗಳಲ್ಲಿ ಮತದಾನ ನಡೆಯುತ್ತಿದೆ. ಮಾರ್ಚ್ 10 ರಂದು ಫಲಿತಾಂಶ ಹೊರಬೀಳಲಿದೆ.



Join Whatsapp