ಸೌದಿಯಲ್ಲಿ ಕೋವಿಡ್ ನಿರ್ಬಂಧ ತೆರವು: ವಿದೇಶಿ ಪ್ರಯಾಣಿಕರು ಕ್ವಾರಂಟೈನ್’ನಲ್ಲಿ ಉಳಿಯಬೇಕಾಗಿಲ್ಲ

Prasthutha|

ದಮಾಂ: ಸೌದಿ ಅರೇಬಿಯಾದಲ್ಲಿ ಕೋವಿಡ್ ಭದ್ರತೆಯ ಭಾಗವಾಗಿ ವಿಧಿಸಲಾಗಿದ್ದ ಮುನ್ನೆಚ್ಚರಿಕಾ ಕ್ರಮಗಳನ್ನು ಮತ್ತು ತಡೆಗಳನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಗೃಹ ಸಚಿವಾಲಯ ಹೇಳಿದೆ.

- Advertisement -

ವೈರಸ್ ವಿರುದ್ಧ ಲಸಿಕೆಯ ವಿತರಣೆಯಲ್ಲಿ ದೇಶವು ಯಶಸ್ಸು ಕಂಡಿದೆ ಎಂದು ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ. ಮಕ್ಕಾದ ಮಸ್ಜಿದುಲ್ ಹರಮ್ ಮತ್ತು ಮದೀನಾದ ಮಸ್ಜಿದುನ್ನಬವಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕ್ರಮಗಳನ್ನು ಹಿಂದೆಗೆಯಲಾಗಿದ್ದು, ಆದರೆ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

 ಸಾರ್ವಜನಿಕ ಸ್ಥಳಗಳಲ್ಲೂ ಸಾಮಾಜಿಕ ಅಂತರವನ್ನು ಕೈಬಿಡಲಾಗಿದೆ. ಈ ಹಿಂದೆ ಎರಡು ಡೋಸ್ ಲಸಿಕೆತೆಗೆದುಕೊಳ್ಳದೆ ಬರುವವರು, ಸಂದರ್ಶಕರು ಮತ್ತು ವಿಸಿಟಿಂಗ್ ವೀಸಾದ ಮೂಲಕ ಸೌದಿಗೆ ಬರುವ ಮೊದಲು ಕಡ್ಡಾಯ ಕ್ವಾರಂಟೈನ್’ನಲ್ಲಿ ಉಳಿಯುವ ಮತ್ತು ಪಿಸಿಆರ್ ಪರೀಕ್ಷೆಯನ್ನು ಸಲ್ಲಿಸುವ ಅಗತ್ಯದಿಂದ ವಿನಾಯಿತಿ ನೀಡಲಾಗಿದೆ.

- Advertisement -

ಯಾತ್ರಾರ್ಥಿಗಳು ಸೌದಿಯಲ್ಲಿರುವಾಗ ಕೋವಿಡ್-19 ರೋಗದ ಚಿಕಿತ್ಸಾ ರಕ್ಷಣೆಯನ್ನು ಪಡೆಯುವ ವಿಮೆಯನ್ನು ಎರಡು ಹರಮ್ ಗಳನ್ನು , ಇತರ ಸಂಸ್ಥೆಗಳನ್ನು ಪ್ರವೇಶಿಸುವ ಮತ್ತು ಸಾರ್ವಜನಿಕ ಸಾರಿಗೆಯ ವೇಳೆ ಕಡ್ಡಾಯಗೊಳಿಸಲಾಗಿದೆ.



Join Whatsapp