ಕೊಪ್ಪಳ: ಉಕ್ರೇನ್’ನಲ್ಲಿ ನಿನ್ನೆ ಯುದ್ಧ ನಿಲ್ಲಿಸಿದ್ದು ಪ್ರಧಾನಿ ನರೇಂದ್ರ ಮೋದಿ ಎಂದು ಸಚಿವ ಹಾಲಪ್ಪ ಭಾನುವಾರ ಹೇಳಿದ್ದಾರೆ.
ಈ ಬಗ್ಗೆ ಕೊಪ್ಪಳದಲ್ಲಿ ಮಾತನಾಡಿದ ಅವರು, ಉಕ್ರೇನ್’ನಲ್ಲಿ ನಿನ್ನೆ ಯುದ್ಧ ನಿಲ್ಲಿಸಿದ್ದು ಪ್ರಧಾನಿ ನರೇಂದ್ರ ಮೋದಿ, ರಷ್ಯಾ 6 ಗಂಟೆಗಳ ಕಾಲ ಯುದ್ಧ ನಿಲ್ಲಿಸೋದು ಸಾಮಾನ್ಯನಾ? ಆದರೆ ಇದನ್ನು ಯಾರೊಬ್ಬರೂ ಅರ್ಥ ಮಾಡಿಕೊಳ್ಳುತ್ತಿಲ್ಲ. ಯುದ್ಧ ನಡೆಯಬೇಕಾದರೆ ಸಾಕಷ್ಟು ತೊಂದರೆಗಳಾಗುತ್ತೆ. ಆ ಸಂದರ್ಭದಲ್ಲಿ ಯಾರೇ ಇದ್ದರೂ ಅನುಭವಿಸಬೇಕು. ಅದನ್ನು ನಮ್ಮ ದೇಶದ ಮೇಲೆ ಹಾಕೋದು ಸರಿಯಲ್ಲ ಎಂದು ತಿಳಿಸಿದ್ದಾರೆ.