ಗಡಿಯಲ್ಲಿ ಶಂಕಿತ ಪಾಕಿಸ್ಥಾನಿ ಡ್ರೋನ್‌; ಕಾರ್ಯಪ್ರವೃತ್ತರಾದ ಭದ್ರತಾ ಪಡೆ

Prasthutha|

 ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಅಂತರಾಷ್ಟ್ರೀಯ ಗಡಿಯಲ್ಲಿ ಶನಿವಾರ ನಸುಕಿನ ವೇಳೆ ಕಂಡುಬಂದ ಶಂಕಿತ ಪಾಕಿಸ್ಥಾನಿ ಡ್ರೋನ್‌ನ ಮೇಲೆ ಗಡಿ ಭದ್ರತಾ ಪಡೆ ಗುಂಡಿನ ದಾಳಿ ನಡೆಸಿದೆ.ಅರ್ನಿಯಾದ ಸಾಮಾನ್ಯ ಪ್ರದೇಶದಲ್ಲಿ ಬೆಳಗಿನ ಜಾವ 4.10ರ ಸುಮಾರಿಗೆ ಡ್ರೋನ್ ಚಟುವಟಿಕೆಯನ್ನು ಬಿಎಸ್ಎಫ್ ಪಡೆಗಳು ಗುರುತಿಸಿವೆ ಎಂದು ಬಿಎಸ್‌ಎಫ್ ಪ್ರಕಟನೆಯಲ್ಲಿ ತಿಳಿಸಿದೆ.

- Advertisement -

ಯಾವುದೇ ಶಸ್ತ್ರಾಸ್ತ್ರಗಳು ಅಥವಾ ಮಾರಕ ದ್ರವ್ಯಗಳನ್ನು ಡ್ರೋನ್ ಮೂಲಕ ಬೀಳಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಪೊಲೀಸರ ನೆರವಿನಿಂದ ಆ ಪ್ರದೇಶದಲ್ಲಿ ಬೃಹತ್ ಜಂಟಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫೆಬ್ರವರಿ 24 ರಂದು ಆರ್‌ ಎಸ್ ಪುರ ಸೆಕ್ಟರ್‌ನಲ್ಲಿ ಡ್ರೋನ್‌ನಿಂದ ಲಷ್ಕರ್-ಎ-ತೈಬಾ ದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಬೃಹತ್ ರವಾನೆಯನ್ನು ಪೊಲೀಸರು ಪತ್ತೆಹಚ್ಚಿ ಪಿಸ್ತೂಲ್ ಮತ್ತು 70 ಸುತ್ತುಗಳು, ಮೂರು ಡಿಟೋನೇಟರ್‌ಗಳು, ಮೂರು ರಿಮೋಟ್-ನಿಯಂತ್ರಿತ ಐಇಡಿಗಳು, ಮೂರು ಬಾಟಲ್ ಸ್ಫೋಟಕಗಳು, ಒಂದು ಬಂಡಲ್ ಕಾರ್ಟೆಕ್ಸ್ ವೈರ್, ಎರಡು-ಟೈಮರ್ ಐಇಡಿಗಳು ಮತ್ತು ಆರು ಗ್ರೆನೇಡ್‌ಗಳನ್ನು ವಶಪಡಿಸಿಕೊಂಡಿದ್ದರು.



Join Whatsapp