ಭಾರತವು ಉಕ್ರೇನ್ ಪರವಾಗಿ ನಿರ್ಣಯವನ್ನು ಬೆಂಬಲಿಸಬೇಕಿತ್ತು: ಮನೀಶ್ ತಿವಾರಿ

Prasthutha|

ಹೊಸದಿಲ್ಲಿ: ಉಕ್ರೇನ್ ಮೇಲೆ ದಾಳಿ ನಡೆಸುತ್ತಿರುವ ರಷ್ಯಾ ವಿರುದ್ಧದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (ಯುಎನ್ ಎಸ್ ಸಿ) ನಿರ್ಣಯದಿಂದ ದೂರವಿರಲು ನಿರ್ಧರಿಸಿರುವ ಭಾರತದ ಕ್ರಮವನ್ನು ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ ಟೀಕಿಸಿದ್ದಾರೆ.

- Advertisement -

ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವನ್ನು ಭಾರತ ಖಂಡಿಸಬೇಕು. ಭಾರತವು ಉಕ್ರೇನ್ ಪರವಾಗಿ ನಿರ್ಣಯವನ್ನು ಬೆಂಬಲಿಸಬೇಕಿತ್ತು. ‘ರಾಷ್ಟ್ರಗಳು ಒಂದಾಗಿ ನಿಲ್ಲುವ ಸಮಯ ಬರುತ್ತದೆ, ಅದು ಬಂದಾಗ ಹಿಂದೆ ಸರಿಯಬಾರದು. ನ್ಯಾಯಸಮ್ಮತವಲ್ಲದ ಆಕ್ರಮಣಶೀಲತೆಯನ್ನು ಎದುರಿಸುತ್ತಿರುವ ಉಕ್ರೇನ್ ಜನರ ಪರವಾಗಿ ಭಾರತವು ಯುಎನ್ ಎಸ್ ಸಿಯಲ್ಲಿ ಮತ ಚಲಾಯಿಸಬೇಕೆಂದು ಒತ್ತಾಯಿಸಿದರು.

‘ವಿದೇಶಿ ನೀತಿಯ ನಿಲುವಿನ ಬಗ್ಗೆ ಹಿಂದಿನ ಸರ್ಕಾರಗಳನ್ನು ಟೀಕಿಸಿದ ಅವರು, ‘ಈ ಹಿಂದೆ ಸೋವಿಯತ್ ಒಕ್ಕೂಟದೊಂದಿಗೆ ಮಾಡಿದ ತಪ್ಪನ್ನು ನಾವು ಮತ್ತೊಮ್ಮೆ ಮಾಡಬಾರದು. 1956ರಲ್ಲಿ ಹಂಗೇರಿ ಮೇಲೆ, 1968ರ ಜೆಕೊಸ್ಲೊವಾಕಿಯಾ, 1979ರ ಅಫ್ಘಾನಿಸ್ತಾನದ ಮೇಲಿನ ಆಕ್ರಮಣವನ್ನು ನಾವು ಖಂಡಿಸಲಿಲ್ಲ. ಹೀಗಾಗಿ, 21ನೇ ಶತಮಾನದಲ್ಲಿ ನೀವು ಬಲದಿಂದ ಯಥಾಸ್ಥಿತಿಯನ್ನು ಬದಲಾಯಿಸಬಹುದೇ?’ ಎಂದು ಕೇಳಿದರು.

- Advertisement -

ಭಾರತ, ಚೀನಾ ಮತ್ತು ಯುಎಇ ಮತದಾನದಿಂದ ದೂರ ಉಳಿದಿದ್ದು, ಪೋಲೆಂಡ್, ಇಟಲಿ, ಜರ್ಮನಿ, ಎಸ್ಟೋನಿಯಾ, ಲಕ್ಸಂಬರ್ಗ್ ಮತ್ತು ನ್ಯೂಝಿಲೆಂಡ್ ಸೇರಿದಂತೆ 11 ರಾಷ್ಟ್ರಗಳು ನಿರ್ಣಯವನ್ನು ಬೆಂಬಲಿಸಿವೆ. ಭದ್ರತಾ ಮಂಡಳಿಯ ಖಾಯಂ ಸದಸ್ಯ ರಾಷ್ಟ್ರವಾಗಿರುವ ರಷ್ಯಾ, ನಿರ್ಣಯವನ್ನು ನಿರ್ಬಂಧಿಸುವ ತನ್ನ ವಿಟೊ ಅಧಿಕಾರವನ್ನು ಬಳಸಿಕೊಂಡಿದೆ.



Join Whatsapp